More

    ವಿಪ್ರೋದ ಅಜೀಂ ಪ್ರೇಮ್‌ಜಿ ತಪ್ಪು ಇನ್ಫೋಸಿಸ್ ಹುಟ್ಟಿಗೆ ಕಾರಣವಾಯ್ತಾ? ನಾರಾಯಣಮೂರ್ತಿ ಹೇಳಿದ್ದೇನು?

    ನವದೆಹಲಿ: “ನನ್ನನ್ನು ನೇಮಿಸಿಕೊಳ್ಳದಿರುವುದು ಅವರು ಮಾಡಿದ ದೊಡ್ಡ ತಪ್ಪುಗಳಲ್ಲಿ ಒಂದಾಗಿದೆ ಎಂದು ವಿಪ್ರೋ ಸಂಸ್ಥಾಪಕ ಅಜೀಮ್ ಪ್ರೇಮ್‌ಜಿ ಒಮ್ಮೆ ಹೇಳಿದ್ದರು” ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ತಿಳಿಸಿದ್ದಾರೆ.

    ಇದನ್ನೂ ಓದಿ: ‘ಓಬಿಸಿ ಅಲ್ಲ, ಓವೈಸಿಯನ್ನು ಟೀಕಿಸಿದ್ದು’: ಹೀಗೆ ಹೇಳಿದ್ದೇಕೆ ಯೋಗ ಗುರು ರಾಮ್‌ದೇವ್?

    ಅವರು ಇತ್ತೀಚೆಗೆ ಖಾಸಗಿ ವಾಹಿನಿ ಆಯೋಜಿಸಿದ್ದ ಸಂವಾದದಲ್ಲಿ, ಒಂದೊಮ್ಮೆ ವಿಪ್ರೋ ಕಂಪನಿಯು ನನ್ನನ್ನು ನೇಮಕ ಮಾಡಿಕೊಂಡಿದ್ದರೆ ಇಂದು ಇನ್ಫೋಸಿಸ್ ಕಂಪನಿಯೇ ಇರುತ್ತಿರಲಿಲ್ಲ. ನನ್ನನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳದೆ ಅಜೀಮ್ ಪ್ರೇಮ್‌ಜೀ ದೊಡ್ಡ ತಪ್ಪು ಮಾಡಿದರು. ಒಂದೊಮ್ಮೆ ಅವರು ನೇಮಕ ಮಾಡಿಕೊಂಡಿದ್ದರೆ, ಪರಿಸ್ಥಿತಿಗಳು ಭಿನ್ನವಾಗಿರುತ್ತಿದ್ದವು ಎಂದು 77ವರ್ಷದ ನಾರಾಯಣಮೂರ್ತಿ ಹೇಳಿದ್ದಾರೆ.

    ನಾನು ಉದ್ಯೋಗಕ್ಕಾಗಿ ವಿಪ್ರೋಗೆ ಅರ್ಜಿ ಹಾಕಿದ್ದೆ. ಆದರೆ ನನಗೆ ಉದ್ಯೋಗ ಸಿಗಲಿಲ್ಲ. ಒಂದು ವೇಳೆ ನೇಮಕಗೊಂಡಿದ್ದರೆ, ನನಗೆ ಮತ್ತು ಪ್ರೇಮ್‌ಜಿಯವರಿಗೆ ಭಿನ್ನವಾದ ಸ್ಥಿತಿಗಳು ಎದುರಾಗುತ್ತಿದ್ದವು ಎಂದು ಅವರು ಹೇಳಿದ್ದಾರೆ.

    ತಮ್ಮ ಆರು ಜನರ ಸ್ನೇಹಿತರೊಂದಿಗೆ, ತಮ್ಮ ಪತ್ನಿ ನೀಡಿದ 10 ಸಾವಿರ ರೂ.ನೊಂದಿಗೆ ನಾರಾಯಣಮೂರ್ತಿ 1981ರಲ್ಲಿ ಇನ್ಫೋಸಿಸ್ ಕಂಪೆನಿ ಸ್ಥಾಪಿಸಿದರು. ಅವರು ಶೂನ್ಯದಿಂದ ಮೇಲೆ ಬಂದವರು. ಅಜೀಮ್ ಪ್ರೇಮ್‌ಜಿ ತಮ್ಮ ಪೂರ್ವಿಕರಿಂದ ಬಂದಿದ್ದ ಅಡುಗೆ ಎಣ್ಣೆ ಉದ್ಯಮದ ಜತೆ ವಿಪ್ರೋ ಸ್ಥಾಪಿಸಿದರು. ಇಬ್ಬರೂ ಮಾಹಿತಿ ತಂತ್ರಜ್ಞಾನ ವಲಯದ ದಿಗ್ಗಜ ಕಂಪೆನಿಗಳ ಸ್ಥಾಪಕರು ಹಾಗೂ ಯಶಸ್ವಿ ಉದ್ಯಮಿಗಳಾಗಿದ್ದಾರೆ. 2014 ಜನವರಿಗೆ ಅನ್ವಯವಾಗುವಂತೆ ಇನ್ಫೋಸಿಸ್ ಕಂಪನಿಯ ಮೌಲ್ಯ 6.65 ಲಕ್ಷ ಕೋಟಿ ಇದ್ದರೆ, ಅಜೀಮ್ ಪ್ರೇಮ್‌ಜಿ ಅವರ ವಿಪ್ರೋ ಕಂಪನಿ ಮೌಲ್ಯ 2.43 ಲಕ್ಷ ಕೋಟಿ ರೂಪಾಯಿ ಇದೆ.

    ಬೆಂಗಳೂರಿನಲ್ಲಿ ಇನ್ನೂ 2 ದಿನ ಚಳಿ- ಬೆಳಗ್ಗೆ ಇರಲಿದೆ ದಟ್ಟಮಂಜು ಮುಸುಕಿದ ವಾತಾವರಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts