VIDEO: ಮಾಸ್ಕ್ ಧರಿಸಿ ಎಂದು ಹೇಳಿದ ಆಶಾ ಕಾರ್ಯಕರ್ತೆಗೆ ಧಮಕಿ, ಕೊಲೆ ಬೆದರಿಕೆ!

Mysuru 21April 20
Published on

ಮೈಸೂರು: ಕರೊನಾ ಶಂಕಿತರನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದಿದ್ದ ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರನ್ನು ಅಟ್ಟಾಡಿಸಿ ಪೊಲೀಸ್ ಬ್ಯಾರಿಕೇಡ್ ಧ್ವಂಸಗೊಳಿಸಿದ ಘಟನೆ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಬೆನ್ನಲ್ಲೇ ಮೈಸೂರಿನಲ್ಲೂ ಕರೊನಾ ವಾರಿಯರ್‌ಗಳಿಗೆ ಧಮಕಿ ಹಾಕಿರುವ ಪ್ರಕರಣ ಜರುಗಿದೆ.

ಅಲಿನಗರದಲ್ಲಿ ಸೋಮವಾರ ಗುಜರಿ ಬಳಿ ಮೆಹಬೂಬ್, ಕಲೀಮ್ ಮತ್ತು ಜೀಶಾನ್ ಎಂಬುವವರು ಕುಳಿತಿದ್ದರು. ಇವರಿಗೆ ಆಶಾ ಕಾರ್ಯಕರ್ತೆ ಸುಮಯಾ ಫಿರ್ದೋಸ್ ಅವರು ‘ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ’ ಎಂದು ಸಲಹೆ ನೀಡಿದರು. ಇಷ್ಟಕ್ಕೇ ಸಿಟ್ಟಾದ ಆ ಮೂವರೂ ಯುವಕರು, ಆಶಾ ಕಾರ್ಯಕರ್ತೆಗೆ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎನ್.ಆರ್. ಠಾಣೆ ಪೊಲೀಸರು ಮೂವರೂ ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.

ಸಚಿವರ ಭೇಟಿ

ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಡಾ.ಸುಧಾಕರ್ ಮಂಗಳವಾರ ಅಲಿನಗರಕ್ಕೆ ಭೇಟಿ ನೀಡಿ ಆಶಾ ಕಾರ್ಯಕರ್ತೆ ಸುಮಯಾಗೆ ಧೈರ್ಯ ತುಂಬಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net