

ಗಾಂಧಿನಗರ: ಸೆರೆಮನೆಯಲ್ಲಿರುವ ಸ್ವಘೋಷಿತ ದೇವಮಾನವ ಅಸಾರಾಂ ಬಾಪು 2013ರ ಅತ್ಯಾಚಾರ ಪ್ರಕರಣವೊಂದರಲ್ಲಿ ತಪ್ಪಿತಸ್ಥ ಎಂದು ಗುಜರಾತ್ನ ಗಾಂಧಿನಗರದ ನ್ಯಾಯಾಲಯ ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ನೀಡಿದೆ.
ಅಸಾರಾಂ ಪತ್ನಿ ಸಹಿತ ಆರು ಮಹಿಳೆಯರನ್ನು ಸಾಕ್ಷ್ಯದ ಕೊರತೆ ಕಾರಣದಿಂದ ಕೋರ್ಟ್ ದೋಷಮುಕ್ತಗೊಳಿಸಿದೆ. ಅಸಾರಾಂ ಬಾಪುಅಹಮದಾಬಾದ್ನ ಹೊರವಲಯದಲ್ಲಿರುವ ಆಶ್ರಮದಲ್ಲಿದ್ದ ಮಹಿಳೆಯೊಬ್ಬರ ಮೇಲೆ 2001 ರಿಂದ 2006ರ ವರೆಗೆ ಅತ್ಯಾಚಾರ ನಡೆಸಿದ್ದ ಎಂದು ಅಹಮದಾಬಾದ್ನ ಚಾಂದ್ಖೇಡಾ ಪೊಲೀಸರು ಸಲ್ಲಿಸಿದ ಎಫ್ಐಆರ್ ತಿಳಿಸಿತ್ತು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 2 ಸಿ(ರೇಪ್), 377 (ಅಸಹಜ ಅಪರಾಧಗಳು) ಮೊದಲಾದ ಸೆಕ್ಷನ್ಗಳಡಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಇನ್ನೊಂದು ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅಸಾರಾಂ ಬಾಪು, ರಾಜಸ್ಥಾನದ ಜೋಧಪುರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.