VIDEO | ಈ ಬಾರಿ ವಯನಾಡ್​ನಿಂದಲ್ಲ, ಹೈದರಾಬಾದ್‌ನಿಂದ ಸ್ಪರ್ಧಿಸಿ; ರಾಹುಲ್ ಗಾಂಧಿಗೆ ಸವಾಲೆಸೆದ ಓವೈಸಿ

Untitled design - 2023-09-25T171820.183
Published on

ಹೈದರಾಬಾದ್​: ವಯನಾಡ್​ನಿಂದ ಚುನಾವಣೆಗೆ ಸ್ಪರ್ಧಿಸುವಲ್ಲ, ಹೈದ್ರಾಬಾದ್​ನಿಂದ ನನ್ನ ವಿರುದ್ಧ ಸ್ಪರ್ಧಿಸಿ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ನೇರ ಸವಾಲನ್ನು ಎಸಗಿದ್ದಾರೆ.

ಸೋಮವಾರ ರ್ಯಾಲಿಯಲ್ಲಿ ಭಾಗವಹಿಸಿ, ಮಾತನಾಡಿದ ಅಸಾದುದ್ದೀನ್ ಓವೈಸಿ, ರಾಹುಲ್ ಗಾಂಧಿ ಅವರೇ 2024ರ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ವಯನಾಡ್​ನಿಂದಲ್ಲ, ಹೈದರಾಬಾದ್‌ನಿಂದ ಸ್ಪರ್ಧಿಸಿ. ನಾನು ನಿಮಗೆ ನೇರ ಸವಾಲು ಹಾಕುತ್ತಿದ್ದೇನೆ ಎಂದು ಹೇಳಿದರು.

ಈ ಬಾರಿ ವಯನಾಡಿಗೆ ಹೋಗಬೇಡಿ, ಹೈದರಾಬಾದ್‌ಗೆ ಬನ್ನಿ. ಇಲ್ಲಿಂದಲೇ ಚುನಾವಣೆಗೆ ನನ್ನ ವಿರುದ್ಧ ಸ್ಪರ್ಧಿಸಿ, ನೀವು ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತೀರಿ, ಅಖಾಡಕ್ಕೆ ಬನ್ನಿ ಸ್ಪರ್ಧೆ ಮಾಡೋಣ ಎಂದು ರಾಹುಲ್​ ಗಾಂಧಿಗೆ ಓಪನ್​ ಚಾಲೆಂಜ್​ ನೀಡಿದರು.

ಕಾಂಗ್ರೆಸ್‌ನವರು ಬಹಳಷ್ಟು ಮಾತನಾಡುತ್ತಾರೆ, ಇದಕ್ಕೆ ನಾನು ಸಿದ್ಧ. ಗಡ್ಡ ಮತ್ತು ಶೇರ್ವಾನಿ ಹೊಂದಿರುವ ನನ್ನನ್ನು ಎದುರಿಸಲು ಬನ್ನಿ, ಸ್ಪರ್ಧೆಯ ಅರ್ಥವೇನೆಂದು ನಿಮಗೆ ತಿಳಿಯುತ್ತದೆ. ಕಾಂಗ್ರೆಸ್ ಆಡಳಿತದಲ್ಲಿ ಬಾಬರಿ ಮಸೀದಿ ಮತ್ತು ಸೆಕ್ರೆಟರಿಯೇಟ್ ಮಸೀದಿ ಕೆಡವಲಾಯಿತು ಎಂದು ಕಾಂಗ್ರೆಸ್​ ವಿರುದ್ಧ ಆರೋಪಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net