More

    ಕುಮಾರರಾಮ ಆಡಳಿತ ದೇಶಕ್ಕೆ ಮಾದರಿ; ಉಪನ್ಯಾಸಕ ಡಾ.ಲಿಂಗಣ್ಣ ಜಂಗಮರಹಳ್ಳಿ ಅಭಿಪ್ರಾಯ

    ಗಂಗಾವತಿ: ಸೀಯರಿಗೆ ಸಹೋದರಿ ಸ್ಥಾನಮಾನ ನೀಡಿದ ಕುಮಾರರಾಮ ಶ್ರೇಷ್ಟ ರಾಜನಾಗಿದ್ದು, ಅಪ್ರತಿಮ ಆಡಳಿತಗಾರ ಎಂಬ ಖ್ಯಾತಿ ಪಡೆದಿದ್ದರು ಎಂದು ಉಪನ್ಯಾಸಕ ಡಾ.ಲಿಂಗಣ್ಣ ಜಂಗಮರಹಳ್ಳಿ ಹೇಳಿದರು.

    ನಗರದ ಬಾಲಕರ ಸ.ಪ.ಪೂ.ಕಾಲೇಜಿನಲ್ಲಿ ಸಿದ್ಧಾರ್ಥ ಎಜ್ಯುಕೇಷನಲ್ ಮತ್ತು ಸೋಶಿಯಲ್ ವೆಲ್ಫೇರ್ ಟ್ರಸ್ಟ್‌ನಿಂದ ಶುಕ್ರವಾರ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಗಂಡುಗಲಿ ಕುಮಾರರಾಮ ದಕ್ಷಿಣ ಭಾರತದ ಜನಮಾನಸದಲ್ಲಿ ಬೇರೂರಿದ್ದರು. ಜನಪರ ಚಿಂತನೆ ಮತ್ತು ಆಡಳಿತದಿಂದ 13ನೇ ಶತಮಾನದಲ್ಲಿ ಅಪಾರ ಗೌರವ, ಮನ್ನಣೆ ಪಡೆದಿದ್ದರು. ಕುಮಾರಾಮರ ಆಡಳಿತ ದೇಶಕ್ಕೆ ಮಾದರಿಯಾಗಿದ್ದು,

    ಅವರ ಆದರ್ಶ ಪ್ರತಿಯೊಬ್ಬರಿಗೂ ಅಳವಡಿಸಿಕೊಳ್ಳಬೇಕು ಎಂದರು.

    ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ ಮಾತನಾಡಿ, ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಪ್ರತಿಯೊಬ್ಬರು ಸ್ಥಾನಮಾನ ಮತ್ತು ಹಕ್ಕು ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.

    ರೋಹಿತ್ ವೇಮುಲ ಜೀವನಾಧರಿತ ಏಕವ್ಯಕ್ತಿ ರಂಗ ಪ್ರದರ್ಶನ ಜರುಗಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

    ರಾಯಚೂರಿನ ರಂಗ ನಿರ್ದೇಶಕರಾದ ಪ್ರವೀಣರೆಡ್ಡಿ ಗುಂಜಳ್ಳಿ, ಲಕ್ಷ್ಮಣ ಮಂಡಲಗೇರಾ, ಇಂಡಸ್‌ಬ್ಯಾಂಕ್ ಅಧ್ಯಕ್ಷ ಎಚ್.ಕನಕರಾಯ, ಹಿರಿಯ ವಕೀಲ ಅಯ್ಯನಗೌಡ, ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫಿ, ಟ್ರಸ್ಟ್ ಅಧ್ಯಕ್ಷ ಹುಸೇನಪ್ಪ ಹಂಚಿನಾಳ್, ಪ್ರಾಚಾರ್ಯ ಬಸಪ್ಪ ನಾಗೋಲಿ, ಉಪನ್ಯಾಸಕಿ ಡಾ.ಸೋಮಕ್ಕ, ಗ್ರಂಥಪಾಲಕ ರಮೇಶ ಗಬ್ಬೂರ್, ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ, ಮುಖಂಡರಾದ ಹುಸೇನಪ್ಪ ಹಂಚಿನಾಳ್, ವಿರೂಪಾಕ್ಷಪ್ಪ, ಸೋಮನಾಥ, ಸುಮಂಗಲಾ, ಸಂಗಪ್ಪ, ಶರಣಪ್ಪ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts