ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ 'ಅಭಿಜಿತ್' ಮುಹೂರ್ತದಲ್ಲೇ ಹೆರಿಗೆ ಮಾಡಿಸಿಕೊಂಡ ಮಹಿಳೆ!

ಜನನ
Published on

ಮುಂಬೈ: ಮಹಾರಾಷ್ಟ್ರದ ಥಾಣೆ ನಗರದ ಆಸ್ಪತ್ರೆಯಲ್ಲಿ 42 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಯೋಧ್ಯೆ ದೇವಸ್ಥಾನದಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನದ ಮುಹೂರ್ತದಲ್ಲಿ ಹೆರಿಗೆ ಮಾಡಲು ವೈದ್ಯರಲ್ಲಿ ಮಾಡಿದ್ದರು.

ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಈ ಮೊದಲು ಹೆರಿಗೆ ದಿನಾಂಕವನ್ನು ಜನವರಿ 23ಕ್ಕೆ (ಮಂಗಳವಾರ) ಕ್ಕೆ ನೀಡಲಾಗಿತ್ತು. ಮಹಿಳೆಯ ಮನವಿ ಮೇರೆಗೆ ರಾಮನ ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತದಲ್ಲಿ ಒಂದು ದಿನ ಮೊದಲೇ ಹೆರಿಗೆ ಮಾಡಲಾಗಿದೆ ಎಂದು ಸಿಸೇರಿಯನ್ ಮಾಡಿದ ಆಸ್ಪತ್ರೆಯ ವೈದ್ಯ ಡಾ.ಚಂದ್ರಕಾಂತ್ ಬರೂರೆ ತಿಳಿಸಿದ್ದಾರೆ.

ಥಾಣೆಯ ನೌಪದಾ ನಿವಾಸಿಯಾಗಿರುವ ಸಮೃದ್ಧಿ ಬಾಮನೆ ಎಂಬ ಮಹಿಳೆ ಐವಿಎಫ್ ಚಿಕಿತ್ಸೆ ಮೂಲಕ ಗರ್ಭ ಧರಿಸಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಗಂಡು ಮಗುವಿನ ಜನನವಾಗಿದ್ದು, ಮಗು ಮತ್ತು ತಾಯಿ ಇಬ್ಬರೂ ಕ್ಷೇಮವಾಗಿದ್ದಾರೆ ಎಂದು ವೈದ್ಯ ಡಾ.ಬರೂರೆ ಅವರು ತಿಳಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ಸಮಯ ಹೊಂದಿಕೆಯಾಗುವಂತೆ ರಾಷ್ಟ್ರವ್ಯಾಪಿ ಅನೇಕರು 'ಮುಹೂರ್ತದ ಹೆರಿಗೆ'ಯನ್ನು ಮಾಡಿಸಿಕೊಂಡಿದ್ದಾರೆ. ಹಲವು ಹೊಸ ದೇವಸ್ಥಾನಗಳ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನಡೆದಿದೆ ಎನ್ನಲಾಗಿದೆ.

(ಏಜನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net