More

    ಶಿಕ್ಷಕನಿಗೆ ಕ್ಯಾನ್ಸರ್​ : 400 ವಿದ್ಯಾರ್ಥಿಗಳು ಮನೆಗೆ ಬಂದು ಏನ್ಮಾಡಿದರು ಗೊತ್ತಾ ?

    ಅಮೆರಿಕಾ: ಶಿಕ್ಷಕರೆಂದರೆ ಪಾಠ ಭೋಧಿಸುವವರು ಮಾತ್ರವಲ್ಲ. ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು. ಪಠ್ಯದ ಜೊತೆಗೆ ಜೀವನ ಮೌಲ್ಯ ತುಂಬುವ ಗುರುಗಳು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾರೆ. ಇದೇ ಕಾರಣಕ್ಕೆ ನಮ್ಮ ಸಂಸ್ಕೃತದಲ್ಲಿ ಶಿಕ್ಷಕರಿಗೆ ಮಹತ್ವದ ಸ್ಥಾನವಿದೆ.
    ಶಿಷ್ಯರು ತಮಗೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯುವುದಿಲ್ಲ.

    ಇದನ್ನೂ ಓದಿ:ಶ್ರೀರಾಮನ ಮಂದಿರ ಲೋಕಾರ್ಪಣೆ: ವಿಶೇಷ ದೈವಿಕ ಅನುಭವ ಹಂಚಿಕೊಂಡ ಪಿ.ಟಿ ಉಷಾ

    ತಮ್ಮ ಬದುಕಿನಲ್ಲಿ ಜ್ಞಾನದ ಬೆಳಕು ತುಂಬಿದ ಶಿಕ್ಷಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಗ ಅವರ ಬಳಿ ಓದಿದ 400 ವಿದ್ಯಾರ್ಥಿಗಳು ಏಕಕಾಲಕ್ಕೆ ಅವರ ಮನೆಗೆ ಬಂದರು. ಅದರ ನಂತರ ಏನಾಯಿತು? ನೋಡಿ

    ಶಿಕ್ಷಕನಿಗೆ ಕ್ಯಾನ್ಸರ್​ : 400 ವಿದ್ಯಾರ್ಥಿಗಳು ಮನೆಗೆ ಬಂದು ಏನ್ಮಾಡಿದರು ಗೊತ್ತಾ ?

    ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಶಿಕ್ಷಕರ ಮನೆ ಮುಂದೆ ಬಂದ ವಿದ್ಯಾರ್ಥಿಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸಿ ಕಣ್ಣೀರು ಹಾಕಿದ್ದಾರೆ. ಮೇಷ್ಟ್ರು ಕಟ್ಟಡದ ಮೇಲಿನಿಂದ ಇದನ್ನೆಲ್ಲಾ ನೋಡಿ ಅವರು ನೋವಿನಿಂದ ಅತ್ತಿದ್ದಾರೆ. ಈ ಘಟನೆ ಅಮೆರಿಕಾದ ಟೆನ್ನೆಸ್ಸಿಯ ನ್ಯಾಶ್‌ವಿಲ್ಲೆಯಲ್ಲಿರುವ ಕ್ರೈಸ್ಟ್ ಪ್ರೆಸ್‌ಬಿಟೇರಿಯನ್ ಅಕಾಡೆಮಿಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಶಿಕ್ಷಕರಾದ ಬೆನ್ ಎಲ್ಲಿಸ್ ಕ್ರೈಸ್ಟ್ ಪ್ರೆಸ್ಬಿಟೇರಿಯನ್ ಅಕಾಡೆಮಿಯಲ್ಲಿ ಮೀಸಲಾದ ಶಿಕ್ಷಣತಜ್ಞರು. ಕ್ಯಾನ್ಸರ್‌ನಿಂದಾಗಿ ಅವರು ಮನೆಗೆ ಸೀಮಿತರಾಗಿದ್ದರು. ಅವರ ಮೇಲೆ ಪ್ರೀತಿ, ಗೌರವ ಹೊಂದಿದ್ದ ವಿದ್ಯಾರ್ಥಿಗಳಿಗೆ ಈ ನೋವು ನುಂಗಲಾರದ ತುತ್ತಾಗಿತ್ತು. ಕ್ಯಾನ್ಸರ್​ನಿಂದ ಶೀಘ್ರ ಗುಣಮುರಾಗಲಿ ಎಂದು ಹಾರೈಸಿದರು.

    ವಿದ್ಯಾರ್ಥಿಗಳು ಶಿಕ್ಷಕರ ಮನೆಗೆ ಬಂದು ಹೋದ 10 ದಿನಗಳ ನಂತರ ಬೆನ್ ಎಲ್ಲಿಸ್ ನಿಧನರಾದರು. ಅವರು ಈಗಾಗಲೇ ಈ ವೈರಲ್ ವೀಡಿಯೋ ಜಗತ್ತಿನಾದ್ಯಂತ ಎಲ್ಲರ ಹೃದಯವನ್ನು ಮುಟ್ಟಿದೆ.

    ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಅಮೆರಿಕಾ, ಭಾರತದಲ್ಲಿ ರಿಯಾಯಿತಿ ದರದಲ್ಲಿ ‘ಹನುಮಾನ್​’ ಸಿನಿಮಾ ಟಿಕೆಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts