More

    ಶ್ರೀರಾಮನ ಮಂದಿರ ಲೋಕಾರ್ಪಣೆ: ವಿಶೇಷ ದೈವಿಕ ಅನುಭವ ಹಂಚಿಕೊಂಡ ಪಿ.ಟಿ ಉಷಾ

    ಅಯೋಧ್ಯೆ: 500 ವರ್ಷಗಳ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ಪುನರ್ ನಿರ್ಮಾಣವಾದ ಶ್ರೀರಾಮನ ಮಂದಿರ ಲೋಕಾರ್ಪಣೆಗೊಂಡಿದೆ. ಈ ಸನ್ನಿವೇಶಕ್ಕೆ ವಿಶ್ವದ 50 ದೇಶಗಳ 92 ಗಣ್ಯ ಅತಿಥಿಗಳು ಸಾಕ್ಷಿಯಾದರು. ಭಾರತದ ಉದ್ಯಮಿಗಳು, ಸಿನೆಮಾ ಹಾಗೂ ಕ್ರಿಕೆಟ್ ತಾರೆಗಳು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಇದನ್ನೂ ಓದಿ:ಕಾರ್ಟೂನ್​ ನೋಡುತ್ತಿದ್ದಾಗ ಹೃದಯಾಘಾತ: 5 ವರ್ಷದ ಮಗು ಮೃತ್ಯು

    ಶ್ರೀರಾಮನ ಮಂದಿರ ಲೋಕಾರ್ಪಣೆ: ವಿಶೇಷ ದೈವಿಕ ಅನುಭವ ಹಂಚಿಕೊಂಡ ಪಿ.ಟಿ ಉಷಾ

    ಅಯೋಧ್ಯೆಯ ಐತಿಹಾಸಿಕ ಕಾರ್ಯಕ್ರಮಕ್ಕೆ ಆಗಮಿಸಿರುವ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಅವರು ಸರಯೂ ನದಿ ತಟದಲ್ಲಿ ವಿಶೇಷವಾದ ದೈವಿಕ ಶಕ್ತಿಯ ಅನುಭವವನ್ನು ಹಂಚಿಕೊಂಡಿದ್ದಾರೆ.

    ಇದೇ ವೇಳೆ ಸರಯೂ ನದಿ ತೀರಕ್ಕೆ ಭೇಟಿ ಕೊಟ್ಟಿದ್ದಾರೆ. ಸರಯೂ ನದಿಯ ದಡದಲ್ಲಿ ವಿಶೇಷವಾದ ಶಾಂತಿಯನ್ನು ಅನುಭವಿಸಿದೆ. ದೈವಿಕ ಶಕ್ತಿಯ ಅನುಭವವಾಗಿದೆ ಎಂದು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಸರಯೂ ನದಿಯ ತಟದಲ್ಲಿ ದೈವಿಕ ಶಾಂತಿಯನ್ನು ಅನುಭವಿಸಿದೆ. ನದಿಯು ಅಯೋಧ್ಯೆ ಮತ್ತು ಭಗವಾನ್ ರಾಮನ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಇಂದಿಗೂ ತನ್ನ ದೈವಿಕ ಶಕ್ತಿಯಿಂದ ಜನರನ್ನು ಆಶೀರ್ವದಿಸುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.

    ಕನ್ನಡ ನಟ ರಿಷಬ್‌ ಶೆಟ್ಟಿ ಈಗಾಗಲೇ ಪತ್ನಿ ಸಮೇತ ಅಯೋಧ್ಯೆ ತಲುಪಿದ್ದು, ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಕೂಡ ಪುಣ್ಯ ಕ್ಷೇತ್ರಕ್ಕೆ ತೆರಳಿದ್ದಾರೆ. ಬಾಲಿವುಡ್‌ ನಟರಾದ ಅಮಿತಾಭ್ ಬಚ್ಚನ್, ಅನುಪಮ್ ಖೇರ್, ರಣದೀಪ್ ಹೂಡಾ, ಕ್ರಿಕೆಟ್​ ತಾರೆಗಳಾದ ವೆಂಕಟೇಶ್​ ಪ್ರಸಾದ್​ ಸೇರಿದಂತೆ ಪ್ರಮುಖರು ಆಗಮಿಸಿದ್ದರು.

    ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದವನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts