ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ಅಮೆರಿಕಾ, ಭಾರತದಲ್ಲಿ ರಿಯಾಯಿತಿ ದರದಲ್ಲಿ 'ಹನುಮಾನ್​' ಸಿನಿಮಾ ಟಿಕೆಟ್​

ಹನುಮಾನ್​
Published on

ತೆಲಂಗಾಣ: ಇತ್ತೀಚೆಗಷ್ಟೇ ಬಿಡುಗಡೆ ಆದ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಹನುಮಾನ್ ಗಮನ ಸೆಳೆಯುತ್ತಿದೆ. ಸೂಪರ್ ಹಿಟ್ ಆಗುವತ್ತ ಮುನ್ನುಗ್ಗುತ್ತಿದೆ. ದೇಶ, ವಿದೇಶಗಳಲ್ಲಿಯೂ ಸಿನಿಮಾ ಉತ್ತಮ ಪ್ರದರ್ಶನವನ್ನೇ ಕಾಣುತ್ತಿದೆ.

ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭದ ಪ್ರಯುಕ್ತ ಅಮೆರಿಕಾದಲ್ಲಿ ಹನುಮಾನ್ ಸಿನಿಮಾ ಬಿಡುಗಡೆ ಮಾಡಿದ ಸಂಸ್ಥೆಯೊಂದು ಅರ್ಧ ಬೆಲೆಗೆ ಟಿಕೆಟ್ ನೀಡುತ್ತಿದೆ. ಅಮೆರಿಕಾದ ವಿವಿಧ ಪ್ರದೇಶಗಳಲ್ಲಿ 11 ಥಿಯೇಟರ್‌ಗಳಲ್ಲಿ ಹನುಮಾನ್ ಚಿತ್ರವನ್ನು ನೋಡಲು ಅರ್ಧ ದರದಲ್ಲಿ ಟಿಕೆಟ್​ ನೀಡುತ್ತಿವೆ. ಇದರಿಂದ ಅಮೆರಿಕಾದಲ್ಲಿರುವ ಭಾರತೀಯರು ಸಂತಸಗೊಂಡಿದ್ದಾರೆ. ಈ ಆಫರ್‌ನಿಂದ ಸೋಮವಾರ ಥಿಯೇಟರ್‌ಗಳು ಹೌಸ್‌ಫುಲ್ ಆಗಲಿವೆ ಹೇಳಲಾಗಿದೆ.

ಭಾರತದಲ್ಲಿ ವಿಶೇಷ ಆಫರ್ : ಅಯೋಧ್ಯೆಯಲ್ಲಿ ಪುನರ್ ನಿರ್ಮಾಣವಾದ ಶ್ರೀರಾಮನ ಮಂದಿರ ಲೋಕಾರ್ಪಣೆಗೊಂಡಿರುವ ಸಂತಸದಲ್ಲಿರುವ ಮಿರಾಜ್ ಸಿನಿಮಾಸ್ ಸಂಸ್ಥೆ ತನ್ನ ಥಿಯೇಟರ್‌ಗಳಿಗೆ ಕೊಡುಗೆಯನ್ನು ಘೋಷಿಸಿದೆ. ಹನುಮಾನ್ ಸಿನಿಮಾ ನೋಡುವವರಿಗೆ ಒಂದು ಟಿಕೆಟ್ ಕೊಂಡರೆ ಮತ್ತೊಂದು ಟಿಕೆಟ್ ಉಚಿತ ಎಂಬ ಆಫರ್ ನೀಡಿದ್ದಾರೆ. ಟಿಕೆಟ್​ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು ಎಂದು ತಿಳಿಸಿದೆ. ಈ ಆಫರ್‌ನಿಂದ ಪ್ರೇಕ್ಷಕರುಇ ಫುಲ್​ ಖುಷಿಯಾಗಿದ್ದಾರೆ. ಅದರೆ ಎಲ್ಲಾ ಥಿಯೇಟರ್ ಗಳಲ್ಲಿ ಈ ಆಫರ್ ಕೊಟ್ಟಿದ್ದರೆ ಚೆನ್ನಾಗಿತ್ತು ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.

ಮಾರಾಟವಾಗುವ ಪ್ರತಿ ಟಿಕೆಟ್​ನ ಐದು ರೂಪಾಯಿ ಮೊತ್ತವನ್ನು ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ಹನುಮಾನ್​ ಚಿತ್ರತಂಡ ಮೊದಲೇ ಘೋಷಿಸಿತ್ತು. ಅಂತೆಯೇ ಈವರೆಗೆ 53.28 ಲಕ್ಷ ಟಿಕೆಟ್​ಗಳನ್ನು ಚಿತ್ರತಂಡ ಮಾರಾಟ ಮಾಡಿದ್ದು ಪ್ರತಿ ಟಿಕೆಟ್​ಗೆ ಐದು ರೂಪಾಯಿಯಂತೆ 2.66 ಕೋಟಿ ರೂಪಾಯಿ ಮೊತ್ತವನ್ನು ಚಿತ್ರತಂಡ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದೆ.

ಹನುಮಾನ್ ಸಿನಿಮಾ ಹನುಮಂತನ ಭಕ್ತನೊಬ್ಬನ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ದೊಡ್ಡ ಸ್ಟಾರ್ ನಟ ಇಲ್ಲದಿದ್ದರೂ ಸಹ ಸಿನಿಮಾದ ಕತೆ, ಗುಣಮಟ್ಟದ ವಿಎಫ್​ಎಕ್ಸ್, ಗ್ರಾಫಿಕ್ಸ್​ಗಳಿಂದ ಈ ಸಿನಿಮಾ ಗಮನ ಸೆಳೆದಿದೆ. ತೆಲುಗು ಮಾತ್ರವೇ ಅಲ್ಲದೆ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಈ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net