ಆರೂರು ಪಂಚಾಯಿತಿ ಗ್ರಾಮಸಭೆ

Aruru
ಆರೂರು ಗ್ರಾಪಂ ಪ್ರಥಮ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷ ಎ.ಗುರುರಾಜ್ ರಾವ್ ಮಾತನಾಡಿದರು.
Published on

ಬ್ರಹ್ಮಾವರ: ಆರೂರು ಗ್ರಾಪಂ 2024-25ನೇ ಸಾಲಿನ ಪ್ರಥಮ ಗ್ರಾಮಸಭೆ ಮಂಗಳವಾರ ಕುಂಜಾಲು ವಿಕೆಆರ್ ಪ್ರೌಢಶಾಲಾ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಎ.ಗುರುರಾಜ್ ರಾವ್ ಅಧ್ಯಕ್ಷತೆಯಲ್ಲಿ ಜರುಗಿತು.

ಬ್ರಹ್ಮಾವರ ತಾಪಂ ಸಹಾಯಕ ಯೋಜನಾಧಿಕಾರಿ ಕೆ.ಸಂದೇಶ್ ಶೆಟ್ಟಿ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಮೆಸ್ಕಾಂ, ತೋಟಗಾರಿಕೆ, ಕೃಷಿ, ಶಿಕ್ಷಣ, ಅರೋಗ್ಯ, ಪೊಲೀಸ್, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಂದಾಯ, ಉದ್ಯೋಗ ಖಾತ್ರಿ, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಇಲಾಖೆ ಮಾಹಿತಿ ನೀಡಿದರು. ಗ್ರಾಪಂ ನಿಕಟಪೂರ್ವ ಅಧ್ಯಕ್ಷ ರಾಜೀವ್ ಕುಲಾಲ್ ಸ್ವಾಗತಿಸಿದರು. ಪಿಡಿಒ ಪ್ರಮಿತಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net