ಮಧುರವಾಗಿದೆ ರೆಡ್​ರಮ್; ಎರಡು ಚಿತ್ರಗಳಲ್ಲಿ ಬಿಜಿಯಾದ ಮಲೆನಾಡ ಹುಡುಗಿ

Madhura Gowda
Published on

ಬೆಂಗಳೂರು: ಕೆಲವು ತಿಂಗಳ ಹಿಂದಷ್ಟೇ ಕನ್ನಡ ಸಿನಿಮಾ ‘ರೆಡ್​ರಮ್ ದೂರದ ಉತ್ತರಪ್ರದೇಶದಲ್ಲಿ ಸೆಟ್ಟೇರಿತ್ತು. ಇದೀಗ ಈ ಚಿತ್ರದ ಮೂಲಕ ಮಲೆನಾಡ ಹುಡುಗಿ ಮಧುರಾ ಗೌಡ ನಾಯಕಿಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಕುಶಾಲನಗರ ಮೂಲದ ಮಧುರಾ, ‘ರೆಡ್​ರಮ್ ಚಿತ್ರೀಕರಣದಲ್ಲಿ ಇರುವಾಗಲೇ ಇನ್ನೊಂದು ಹೆಸರಿಡದ ಬಹುತಾರಾಗಣದ ಬಹುಕೋಟಿ ಬಜೆಟ್​ನ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಜತೆಗೆ ಕೆಲವು ಚಿತ್ರಗಳ ಮಾತುಕತೆ ನಡೆಯುತ್ತಿದೆ, ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಮಧುರಾ.

ಮಾಡೆಲಿಂಗ್ ಹಾಗೂ ನಟನೆಯಲ್ಲಿ ತರಬೇತಿ ಪಡೆದಿರುವ ಮಧುರಾ, ಸಾಕಷ್ಟು ತಯಾರಿ ಮಾಡಿಕೊಂಡೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೌಟಿಲ್ಯ ಸಿನಿಮಾಸ್ ಹಾಗೂ ಹನಿ ಚೌಧರಿ ಫಿಲಂಸ್ ಜಂಟಿಯಾಗಿ ನಿರ್ವಿುಸುತ್ತಿರುವ ‘ರೆಡ್​ರಮ್ ಕ್ರೖೆಮ್ ಥ್ರಿಲ್ಲರ್ ಚಿತ್ರವಾಗಿದ್ದು, ಪ್ರಮೋದ್ ಜೋಯಿಸ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ‘ರೆಡ್​ರಮ್ ಅನ್ನು ಇಂಗ್ಲೀಷ್​ನಲ್ಲಿ ಹಿಂದಿನಿಂದ ಓದಿದರೆ ಮರ್ಡರ್ ಎಂದಾಗುತ್ತದೆ. ಕೆಲವು ಹಿಂದಿ ಚಿತ್ರಗಳಲ್ಲಿ ನಟಿಸಿರುವ ರಾಜ್​ವೀರ್ ಈ ಚಿತ್ರಕ್ಕೆ ನಾಯಕನಾಗಿದ್ದು, ಅವರಿಗೆ ಮುಂಬೈ ಮೂಲದ ಪ್ರಾಚಿ ಶರ್ಮಾ ಹಾಗೂ ಕನ್ನಡತಿ ಮಧುರಾ ಗೌಡ ನಾಯಕಿಯರು. ಜತೆಗೆ ಶ್ರೀದತ್ತಾ, ಅಫ್ಜಲ್, ಯತಿರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ. ಕನ್ನಡ ಚಿತ್ರವಾಗಿದ್ದರೂ ಕೆಲವು ಬಾಲಿವುಡ್ ಕಲಾವಿದರೂ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net