ನವಯುಗದಲ್ಲೂ ಅಂಚೆ ಮಿಂಚು; ಆಕರ್ಷಕ ಬಡ್ಡಿ, ಉಳಿತಾಯ ಪತ್ರಗಳಿಗೆ ಬೇಡಿಕೆ

Post office
Published on

| ಆರ್.ತುಳಸಿಕುಮಾರ್ ಬೆಂಗಳೂರು

ಒಂದೂವರೆ ಶತಮಾನದಿಂದ ದೇಶದ ಉದ್ದಗಲಕ್ಕೂ ಕೋಟ್ಯಂತರ ಜನಸಾಮಾನ್ಯರ ಸಂಪರ್ಕ ಸಂಹವನ ವಾಹಕವಾಗಿ ಗುರುತಿಸಿಕೊಂಡಿರುವ ಅಂಚೆ ಇಲಾಖೆ, ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಸೇವೆ ಒದಗಿಸುತ್ತಿರುವ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬದಲಾದ ಕಾಲಘಟ್ಟದಲ್ಲಿ ಅಂಚೆಯಣ್ಣನಿಂದ ಪತ್ರ ಬಟವಾಡೆ ಕಾರ್ಯ ಈಗ ಡಿಜಿಟಲ್ ಸ್ಪರ್ಶ ಪಡೆದಿದೆ. ಇದರ ಜತೆಗೆ ಇಲಾಖೆಯ ಉಳಿತಾಯ ಖಾತೆ ಯೋಜನೆಗಳು ಎಲ್ಲೆಡೆ ದೊಡ್ಡ ಸದ್ದು ಮಾಡುತ್ತಿದೆ.

ಸುಕನ್ಯಾ ಸಮೃದ್ಧಿ ಶೈನಿಂಗ್: ಅಂಚೆ ಇಲಾಖೆ ಹಾಗೂ ರಾಜ್ಯ ಸರ್ಕಾರದ ಸಹಕಾರದಲ್ಲಿ ಆರಂಭವಾಗಿರುವ ‘ಸುಕನ್ಯಾ ಸಮೃದ್ಧಿ’ ಯೋಜನೆ ದೊಡ್ಡ ಮಟ್ಟದಲ್ಲಿ ಜನಪ್ರಿಯಗೊಂಡಿದೆ. ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಈ ಯೋಜನೆ ಹೆಣ್ಣುಮಕ್ಕಳ ಭವಿಷ್ಯದ ಹೂಡಿಕೆ/ಹಣಉಳಿತಾಯ ಮಾಡಲು ಚಿಮ್ಮುಹಲಗೆಯಾಗಿ ಮಾರ್ಪಟ್ಟಿದೆ. ಯೋಜನೆ ಆರಂಭವಾದ ಎರಡೇ ವರ್ಷ ದಲ್ಲಿ 25.43 ಲಕ್ಷ ಖಾತೆಗಳು ತೆರೆದಿರುವುದು ಸಕನ್ಯಾ ಸಮೃದ್ಧಿ ಯೋಜನೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಅಂಚೆ ಇಲಾಖೆಯ ವಿವಿಧ ಉಳಿತಾಯ ಪತ್ರಗಳ ಯೋಜನೆಗಳು ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿವೆ. ಗ್ರಾಮೀಣ ಭಾಗದಲ್ಲೂ ನಮ್ಮ ಇಲಾಖೆಯ ಸಿಬ್ಬಂದಿ ಇಂತಹ ಯೋಜನೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಸಕ್ರಿಯರಾಗಿದ್ದಾರೆ. ‘ಸುಕನ್ಯಾ ಸಮೃದ್ಧಿ ಯೋಜನೆ’ಗೆ ಸಾರ್ವಜನಿಕರಿಂದ ಹೆಚ್ಚು ಸ್ಪಂದನೆ ವ್ಯಕ್ತವಾಗಿದೆ. ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸಲು ಸಂಸ್ಥೆ ಬದ್ಧವಾಗಿದೆ. | ರಾಜೇಂದ್ರಕುಮಾರ್, ಚೀಫ್ ಪೋಸ್ಟ್​ಮಾಸ್ಟರ್ ಜನರಲ್, ಕರ್ನಾಟಕ ವೃತ್ತ

ಪ್ರಮುಖ ಉಳಿತಾಯ ಖಾತೆ ಯೋಜನೆಗಳು

1. ಎಸ್​ಬಿ ಉಳಿತಾಯ ಖಾತೆ
  • 18 ವರ್ಷ ಮೇಲ್ಪಟ್ಟವರು ಅಂಚೆ ಕಚೇರಿಯಲ್ಲಿ ಖಾತೆ ಹೊಂದಬಹುದು
  • 10 ವರ್ಷ ಮೇಲ್ಪಟ್ಟವರೂ ಪಾಲಕರ ಜತೆಗೂಡಿ ಖಾತೆ ತೆರೆಯಬಹುದು
  • ಕನಿಷ್ಠ 500 ರೂ. ಪಾವತಿಸಿ ಖಾತೆ ಆರಂಭಿಸಬಹುದು
  • ಒಮ್ಮೆಗೆ ಕನಿಷ್ಠ ಹಣ ಹಿಂತೆಗೆಯುವಿಕೆ ಮಿತಿ 50 ರೂ.
  • ಖಾತೆಯಲ್ಲಿರುವ ಹಣಕ್ಕೆ ವಾರ್ಷಿಕ ಶೇ.4 ಬಡ್ಡಿ ದರದಲ್ಲಿ ಪಾವತಿ.
  • ಚೆಕ್ ಬುಕ್, ಎಟಿಎಂ ಕಾರ್ಡ್ ಸೌಲಭ್ಯ
2.ರಾಷ್ಟ್ರೀಯ ಉಳಿತಾಯ ರಿಕರಿಂಗ್ ಡಿಪಾಸಿಟ್ ಅಕೌಂಟ್
  • ಕನಿಷ್ಠ 100 ರೂ. ಠೇವಣಿಗೆ ಅವಕಾಶ
  • ವಾರ್ಷಿಕ ಶೇ. 6.7 ಬಡ್ಡಿ ಪಾವತಿ
  • ಅವಧಿಗೆ ಮುನ್ನ ಖಾತೆ ಬಂದ್ ಮಾಡಿದರೆ ಎಸ್​ಬಿ ಬಡ್ಡಿದರ ಅನ್ವಯ
  • ಏಕವ್ಯಕ್ತಿ, ಜಂಟಿ ಖಾತೆ ಹಾಗೂ ಮೈನರ್ ಖಾತೆಗೂ ಅವಕಾಶ.
3.ರಾಷ್ಟ್ರೀಯ ಉಳಿತಾಯ ಟೈಮ್ ಡಿಪಾಸಿಟ್ ಖಾತೆ (ಟಿಡಿ)
  • ಕನಿಷ್ಠ 1,000 ರೂ. ಠೇವಣಿಯಿಂದ ಆರಂಭ, ಗರಿಷ್ಠ ಮಿತಿ ಇಲ್ಲ
  • 1, 2, 3 ಹಾಗೂ 5 ವರ್ಷದ ಅವಧಿಗೆ ಖಾತೆ ತೆರೆಯಬಹುದು
  • ವಾರ್ಷಿಕ ಬಡ್ಡಿ ಕ್ರಮವಾಗಿ ಶೇ.6.9, ಶೇ.7, ಶೇ.7 ಹಾಗೂ ಶೇ.7.5
  • ಮೆಚ್ಯುರಿಟಿ ಅವಧಿ 1, 2, 3 ಹಾಗೂ 5 ವರ್ಷಕ್ಕೆ ಅನ್ವಯ.
4. ಹಿರಿಯ ನಾಗರಿಕರ ಉಳಿತಾಯ ಯೋಜನೆ
  • ಏಕ ವ್ಯಕ್ತಿ ಅಥವಾ ಜಂಟಿ ಪತಿ/ಪತ್ನಿ ಹೆಸರಿನಲ್ಲಿ ಖಾತೆ ಹೊಂದಬಹುದು
  • ಕನಿಷ್ಠ ಠೇವಣಿ 1,000 ರೂ., ಗರಿಷ್ಠ 30 ಲಕ್ಷ ರೂ.ವರೆಗೆ ಅವಕಾಶ
  • ಖಾತೆದಾರರಿಗೆ ತ್ರೖೆಮಾಸಿಕವಾರು ಬಡ್ಡಿ ಪಾವತಿ
  • ಬಡ್ಡಿಯಿಂದ ಬರುವ ಹಣ ಎಸ್​ಬಿ ಖಾತೆಗೆ ವರ್ಗಾಯಿಸಲು ಅವಕಾಶ
  • ವಾರ್ಷಿಕ 50 ಸಾವಿರ ರೂ. ಮೇಲ್ಪಟ್ಟ ಬಡ್ಡಿ ಹಣಕ್ಕೆ ತೆರಿಗೆ ಉಂಟು.
5. ಮಾಸಿಕ ಉಳಿತಾಯ ಖಾತೆ (ಎಂಐಎಸ್)
  • ಕನಿಷ್ಠ ಠೇವಣಿ 1000 ರೂ., ಗರಿಷ್ಠ ಮಿತಿ 9 ಲಕ್ಷ ರೂ. (ಜಂಟಿ ಖಾತೆಗೆ 15 ಲಕ್ಷ ರೂ.)
  • ವಾರ್ಷಿಕ ಬಡ್ಡಿ ದರದ ಹಣ ಮಾಸಿಕವಾರು ಪಾವತಿ
  • ಬಡ್ಡಿ ಹಣ ಉಳಿತಾಯ ಖಾತೆಗೆ ವರ್ಗಾಯಿಸಲು ಅವಕಾಶ
  • 1 ವರ್ಷದವರೆಗೆ ಠೇವಣಿ ವಾಪಸ್ ಪಡೆಯುವಂತಿಲ್ಲ, ಮೆಚ್ಯುರಿಟಿ ಅವದಿ 5 ವರ್ಷ.
6. ಸುಕನ್ಯಾ ಸಮೃದ್ಧಿ ಯೋಜನೆ
  • 10 ವರ್ಷದ ಕೆಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಠೇವಣಿ ಇಡಬಹುದು
  • ಒಂದು ಮಗುವಿಗೆ ಒಂದೇ ಖಾತೆ, ಕುಟುಂಬದ ಇಬ್ಬರಿಗೆ ಮಾತ್ರ ಅವಕಾಶ
  • ಕನಿಷ್ಠ ಠೇವಣಿ 250 ರೂ., ಗರಿಷ್ಠ 1.50 ಲಕ್ಷ ರೂ. (ವಾರ್ಷಿಕ)
  • ಠೇವಣಿ ಹಣಕ್ಕೆ ಬಡ್ಡಿ ದರ - ವಾರ್ಷಿಕ ಶೇ.8
  • ಖಾತೆ ಅರ್ಧಕ್ಕೆ ಸ್ಥಗಿತಗೊಂಡಲ್ಲಿ 15 ವರ್ಷದೊಳಗೆ ಠೇವಣಿ ಹಿಂಪಡೆಯಬಹುದು
  • ಖಾತೆಯನ್ನು ಹೆಣ್ಣುಮಕ್ಕಳ ಪಾಲಕರು ನಿರ್ವಹಿಸಬಹದು.
7. ಮಹಿಳಾ ಸಮ್ಮಾನ್ ಉಳಿತಾಯ ಪತ್ರ
  • ಮಹಿಳೆ, ಪಾಲಕರ ನಿಗಾದಲ್ಲಿ ಮೈನರ್ ಖಾತೆಗೆ ಅವಕಾಶ
  • ಠೇವಣಿ ಮೊತ್ತ - ಕನಿಷ್ಠ 1,000 ರೂ., ಗರಿಷ್ಠ 2 ಲಕ್ಷ ರೂ.
  • 3 ತಿಂಗಳ ಬಳಿಕ ಎರಡನೇ ಖಾತೆ ಕೂಡ ತೆರೆಯಬಹುದು.
  • 2 ವರ್ಷ ಅವಧಿಯ ಯೋಜನೆ, ವಾರ್ಷಿಕ ಶೇ.7.5ರಂತೆ ಬಡ್ಡಿ ಪಾವತಿ
  • 1 ವರ್ಷದ ಬಳಿಕ ಶೇ.40 ಠೇವಣಿ ಹಿಂತೆಗೆತಕ್ಕೆ ಅವಕಾಶ
8. ರಾಷ್ಟ್ರೀಯ ಉಳಿತಾಯ ಪತ್ರ (ಎನ್​ಎಸ್​ಸಿ)
  • ವಯಸ್ಕ, ಜಂಟಿ, 10 ವರ್ಷ ಮೇಲ್ಪಟ್ಟ ಮೈನರ್ ಖಾತೆ
  • 5 ವರ್ಷದ ಯೋಜನೆ, ವಾರ್ಷಿಕ ಶೇ.7.7 ಬಡ್ಡಿ
  • ಠೇವಣಿ ಮೊತ್ತ ಕನಿಷ್ಠ 1,000 ರೂ., ಗರಿಷ್ಠ ಮಿತಿ ಇಲ್ಲ
  • ಷರತ್ತು ಆಧರಿಸಿ ಮೆಚ್ಯುರಿಟಿ ಮುನ್ನ ಹಣ ಹಿಂತೆಗೆಯಲು ಅವಕಾಶ
  • ಖಾತೆದಾರ ಮರಣಿಸಿದ್ದಲ್ಲಿ ಕುಟುಂಬದ ಇತರ ಸದಸ್ಯರಿಗೆ ವರ್ಗಾಯಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net