ಇಂದು ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಜಿಹಾದ್, ಮತಾಂತರ ಇನ್ನೂ ಅನೇಕ ಸಮಸ್ಯೆಗಳು ನಮ್ಮ ದೇಶವನ್ನು ಕಾಡುತ್ತಿವೆ. ಈ ಎಲ್ಲ ಸಮಸ್ಯೆಗಳು ಕೇವಲ ಹಿಂದೂ ರಾಷ್ಟ್ರದಲ್ಲಿ ನಿರ್ಮೂಲನೆಯಾಗಬಲ್ಲವು. ಹಿಂದೂ ರಾಷ್ಟ್ರ ಎಂದರೆ ಕೇವಲ ಹಿಂದೂಗಳಿರುವ ರಾಷ್ಟ್ರ ಎಂದರ್ಥವಲ್ಲ, ‘ಮೇರುತಂತ್ರ ಧರ್ಮಗ್ರಂಥದಲ್ಲಿ ‘ಹೀನಂ ದೂಷಯತಿ ಇತಿ ಹಿಂದುಃ | ಅಂದರೆ ‘ಹೀನ ಅಥವಾ ಕನಿಷ್ಠ ರಜ-ತಮ ಗುಣಗಳನ್ನು ‘ದೂಷಯತಿ, ಅಂದರೆ ನಾಶಪಡಿಸುವವನೇ ಹಿಂದೂ ಎಂದು ‘ಹಿಂದೂ ಶಬ್ದದ ಉತ್ಪತ್ತಿಯನ್ನು ಕೊಡಲಾಗಿದೆ. ಯಾರು ರಜ-ತಮಾತ್ಮಕ ಹೀನಗುಣಗಳನ್ನು ಮತ್ತು ಅದರಿಂದಾಗಿ ಘಟಿಸುವ ಕಾಯಾ, ವಾಚಾ ಮತ್ತು ಮಾನಸಿಕ ಸ್ತರದಲ್ಲಿನ ಹೀನ ಕರ್ಮಗಳನ್ನು ತಿರಸ್ಕರಿಸುತ್ತಾನೆಯೋ; ಅಂದರೆ ಸಾತ್ತ್ವಿಕ ಆಚರಣೆಯನ್ನು ಮಾಡುತ್ತಾನೆಯೋ ಅವನೇ ‘ಹಿಂದೂ. ಇಂತಹ ಸತ್ತ್ವಗುಣಿ ವ್ಯಕ್ತಿಯು ‘ನಾನು ಮತ್ತು ನನ್ನ ಎಂಬಂತಹ ಸಂಕುಚಿತ ವಿಚಾರಗಳನ್ನು ತ್ಯಜಿಸಿ ವಿಶ್ವಕಲ್ಯಾಣದ ಬಗ್ಗೆ ವಿಚಾರ ಮಾಡುತ್ತಾನೆ. ಅಂತಹ ಹಿಂದೂ ರಾಷ್ಟ್ರಕ್ಕೆ ಈಗ ಎಲ್ಲೆಡೆ ಕೂಗು ಕೇಳುತ್ತಿದೆ. ‘ಹಿಂದೂ ರಾಷ್ಟ್ರ’ ಈಗ ಚಳುವಳಿಯಾಗಿ ಮಾರ್ಪಟ್ಟಿದೆ. ನೂರಾರು ಹಿಂದೂ ಸಂಘಟನೆಗಳು, ಕಾರ್ಯಕರ್ತರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಇದೊಂದು ರೀತಿಯಲ್ಲಿ ಯುಗ ಪರಿವರ್ತನೆಯ ಕಾಲವೇ ಆಗಿದೆ.