ಜಮ್ಮು-ಕಾಶ್ಮಿರದಲ್ಲಿ ಸೇನಾ ಹೆಲಿಕಾಪ್ಟರ್​ ಪತನ; ಇಬ್ಬರಿಗೆ ಗಾಯ

Army Helicopter
Published on

ಶ್ರೀನಗರ: ಭಾರತೀಯ ಸೇನೆಗೆ ಸೇರಿದ್ದ ಹೆಲಿಕಾಪ್ಟರ್​ ಪತನವಾಗಿರುವ ಆಘಾತಕಾತಿ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್ವರ್ ಜಿಲ್ಲೆಯಲ್ಲಿ ನಡೆದಿದೆ.

ಸೇನೆಗೆ ಸೇರಿದ್ದ ಎಎಲ್​ಎಚ್​​ ಧ್ರುವ್​ ಲಘು ಹೆಲಿಕಾಪ್ಟರ್​ನಲ್ಲಿ ಮೂವರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಮತ್ತು ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮೂರನೇ ಬಾರಿ

ಧ್ರುವ್​ ಲಘು ಹೆಲಿಕಾಪ್ಟರ್​ ಕಳೆದ ಎರಡು ತಿಂಗಳಲ್ಲಿ ಮುರು ಬಾರಿ ಪತನವಾಗಿದ್ದು ಮೂರನೇ ಘಟನೆ ಇದಾಗಿದ್ದು ಪತನದಿಂದಾಗಿ ಪೈಲಟ್‌ಗಳು ಗಾಯಗೊಂಡಿದ್ದಾರೆ.

ಸದ್ಯ ಅವರು ಸುರಕ್ಷಿತರಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net