

ಬೆಂಗಳೂರು: ಆರ್‌ಎಸ್‌ಎಸ್‌ಗೆ ಮುಸ್ಲಿಮರು ಸೇರಲು ಅವಕಾಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ RSS ಮುಖಸ್ಥ ಮೋಹನ್ ಭಾಗವತ್, ಸಂಘದಲ್ಲಿ ಬೇರೆ ಯಾವುದೇ ಜಾತಿ ಮತ್ತು ಧರ್ಮವನ್ನು ಪ್ರತ್ಯೇಕವಾಗಿ ಗುರುತಿಸಲಾಗುವುದಿಲ್ಲ ಎಂದು ಭಾನುವಾರ (ನ.9) ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್, ಸಂಘಟನೆಯಲ್ಲಿ ಯಾವುದೇ ಬ್ರಾಹ್ಮಣರನ್ನು ಪ್ರತ್ಯೇಕವಾಗಿ ಗುರುತಿಸಲಾಗುವುದಿಲ್ಲ. ಬೇರೆ ಯಾವುದೇ ಜಾತಿಯನ್ನು ಪ್ರತ್ಯೇಕವಾಗಿ ನೋಡಲಾಗುವುದಿಲ್ಲ. ಯಾವುದೇ ಮುಸ್ಲಿಮರನ್ನು ಅನುಮತಿ ಆಧಾರದ ಮೇಲೆ ಸೇರಿಸಿಕೊಳ್ಳಲಾಗುವುದಿಲ್ಲ, ಅಥವಾ ಪ್ರತ್ಯೇಕ ಗುರುತಿನೊಂದಿಗೆ ಸಂಘಕ್ಕೆ ಯಾವುದೇ ಕ್ರಿಶ್ಚಿಯನ್ನರನ್ನು ಸ್ವೀಕರಿಸಲಾಗುವುದಿಲ್ಲ. ಜನರನ್ನು ಹಿಂದೂಗಳಾಗಿ ಮಾತ್ರ ಸ್ವೀಕರಿಸಲಾಗುತ್ತದೆ ಎಂದಿದ್ದಾರೆ. ದೇಶದಲ್ಲಿರುವ ವಿವಿಧ ಪಂಗಡಗಳ ಜನರು ಸಂಘಕ್ಕೆ ಸೇರಬಹುದು. ಆದರೆ, ಅವರು ತಮ್ಮ ಪ್ರತ್ಯೇಕ ಗುರುತುಗಳನ್ನು ಬಿಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ನೀವು ಸಂಘದ ಶಾಖೆಗೆ ಬಂದಾಗ, ನೀವು ಭಾರತ ಮಾತೆಯ ಮಗ ಮತ್ತು ಈ ಹಿಂದೂ ಸಮಾಜದ ಸದಸ್ಯರಾಗಿ ಬರುತ್ತೀರಿ. ಮುಸ್ಲಿಮರು ಶಾಖೆಗೆ ಬರುತ್ತಾರೆ, ಕ್ರಿಶ್ಚಿಯನ್ನರು ಶಾಖೆಗೆ ಬರುತ್ತಾರೆ, ಹಿಂದೂ ಸಮಾಜ ಎಂದು ಕರೆಯಲ್ಪಡುವ ಇತರ ಜಾತಿಗಳ ಜನರು ಶಾಖೆಗೆ ಬರುತ್ತಾರೆ. ಆದರೆ ನಾವು ಅವರ ಸಂಖ್ಯೆಯನ್ನು ದಾಖಲಿಸುವುದಿಲ್ಲ ಅಥವಾ ಯಾರು ಎಂದು ಕೇಳುವುದಿಲ್ಲ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು. ಸಂಘವು ಕಾರ್ಯನಿರ್ವಹಿಸುವ ವಿಧಾನ ಇದು ಎಂದು ತಿಳಿಸಿದ್ದಾರೆ.
ಭಾರತ ಯಾವಾಗಲೂ ಪಾಕಿಸ್ತಾನದೊಂದಿಗೆ ಶಾಂತಿಯನ್ನು ಬಯಸುತ್ತದೆ. ಆದರೆ ನೆರೆಯ ದೇಶ ಶಾಂತಿಯನ್ನು ಬಯಸುವುದಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ. ನಾವು ಯಾವಾಗಲೂ ಪಾಕಿಸ್ತಾನದೊಂದಿಗೆ ಶಾಂತಿಯನ್ನು ಬಯಸುತ್ತೇವೆ. ನಮ್ಮೊಂದಿಗೆ ಶಾಂತಿಯನ್ನು ಬಯಸದಿರುವುದು ಪಾಕಿಸ್ತಾನ ಮಾತ್ರ. ಭಾರತಕ್ಕೆ ಹಾನಿ ಮಾಡುವುದರಿಂದ ಪಾಕಿಸ್ತಾನ ಸ್ವಲ್ಪ ತೃಪ್ತಿ ಪಡೆಯುವವರೆಗೆ, ಅದು ಮುಂದುವರಿಸುತ್ತದೆ. ಅದರೆ ಪಾಕ್ ಪುನರಾವರ್ತಿತ ಪ್ರಯತ್ನಗಳಿಗೆ ನಾವು ಬಲವಾಗಿ ಪ್ರತಿಕ್ರಿಯಿಸಬೇಕು ಪಾಕಿಸ್ತಾನದೊಂದಿಗೆ ಶಾಂತಿಯ ಹಾದಿಯು ಸಂಘರ್ಷವನ್ನು ಪ್ರಾರಂಭಿಸುದಿಲ್ಲ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಪಾಕಿಸ್ತಾನವು 1971 ರಲ್ಲಿ ದಾಳಿ ಮಾಡಿ ತನ್ನ 90,000 ಸೈನ್ಯವನ್ನು ಕಳೆದುಕೊಂಡಿತು. ಪಾಕ್ ಇದನ್ನು ಮುಂದುವರಿಸಿದರೆ, ಅವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಸ್ಪರ್ಧಿಸುವುದು ಅಥವಾ ಹೋರಾಡುವುದಕ್ಕಿಂತ ಭಾರತದೊಂದಿಗೆ ಸಹಕರಿಸುವುದು ಉತ್ತಮ ಎಂದು ಪಾಕಿಸ್ತಾನ ಅರ್ಥಮಾಡಿಕೊಳ್ಳಬೇಕು. ಹತ್ತಿರ ಬರುವುದು ಉತ್ತಮ, ಇಲ್ಲದಿದ್ದರೆ ಅವರು ನಷ್ಟ ಅನುಭವಿಸುತ್ತಾರೆ. ಆದರೆ ಅವರಿಗೆ ಈ ಭಾಷೆ ಅರ್ಥವಾಗುತ್ತಿಲ್ಲ. ಆದ್ದರಿಂದ ನಾವು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಬೇಕು ಎಂದು RSS ಮುಖ್ಯಸ್ಥರು ತಿಳಿಸಿದ್ದಾರೆ. (ಏಜೆನ್ಸೀಸ್)