ಅರಸೀಕೆರೆ ಹೆಂಗಸರು ನನ್ನ ಮುಖ ಕಂಡ ಕೂಡಲೇ ಬೈತಾರೆ: ಶಾಸಕ ಶಿವಲಿಂಗೇಗೌಡ ಅಳಲು

K L Shivalinge gowda 1
Published on

ಬೆಂಗಳೂರು: ಅರಸೀಕೆರೆಯ ಹೆಂಗಸರು ನನ್ನನ್ನು ನೋಡಿದರೆ ಬೈತಾರೆ ಎಂದು ವಿಧಾನಸಭೆ ಕಲಾಪದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅಳಲು ತೋಡಿಕೊಂಡರು.

ಪ್ರಶ್ನೋತ್ತರ ಅವಧಿಯಲ್ಲಿ ಅರಸೀಕೆರೆಯಲ್ಲಿ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿರುವ ಕುರಿತು  ಪ್ರಶ್ನಿಸಿಸಿ ಶಿವಲಿಂಗೇಗೌಡ, ಅರಸೀಕೆರೆಗೆ ನಾನು ಹೋಗದ ಪರಿಸ್ಥಿತಿಯಿದೆ. ಅಲ್ಲಿನ ಹೆಂಗಸರು ನನ್ನನ್ನು ನೋಡಿದರೆ, ಬೈಯುತ್ತಾರೆ. ಒಳಚರಂಡಿಯೂ ಬೇಡ, ಏನೂ ಬೇಡ ಮೊದಲು ಕಿತ್ತುಕೊಂಡು ಹೋಗಿ ಎನ್ನುತ್ತಿದ್ದಾರೆ ಎಂದರು. ಇದನ್ನೂ ಓದಿರಿ ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಶಿವಲಿಂಗೇಗೌಡರ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಪರವಾಗಿ ಉತ್ತರಿಸಿದ ಸಚಿವ ಶಿವರಾಂ ಹೆಬ್ಬಾರ್, ಒಳಚರಂಡಿ ಅಳವಡಿಕೆ ಯೋಜನೆಯ ಮೂರು ಔಟ್‌ಾಲ್ ಕೊಳವೆ ಮಾರ್ಗಗಳಲ್ಲಿ ಎರಡು ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ 1.7 ಕಿ.ಮೀ. ಉದ್ದಕ್ಕೆ ಕೊಳವೆ ಅಳವಡಿಸಬೇಕಿದೆ. ಖಾಸಗಿ ಜಮೀನಿನಲ್ಲಿ ಒಳಚರಂಡಿ ಕೊಳವೆ ಅಳವಡಿಸಬೇಕಿದ್ದು, ಅದನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ನಗರಸಭೆಯಲ್ಲಿ ಅನುದಾನ ಕೊರತೆಯಿದ್ದು, 3.29 ಎಕರೆ ಭೂ ಸ್ವಾಧೀನಕ್ಕೆ 9.62 ಕೋಟಿ ರೂ. ಅವಶ್ಯಕತೆಯಿದೆ. ಈ ಅನುದಾನ ಒದಗಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಪ್ಪಿಗೆ ದೊರೆತ ಕೂಡಲೇ ಕಾಮಗಾರಿ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿರಿ ವಿಧಾನಸಭೆಯಲ್ಲಿ ಹಾಸ್ಯದ ಹೊಳೆ ಹರಿಸಿದ ಸಿದ್ದು ಬಟ್ಟೆ!

ಇದಕ್ಕೆ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ಬೇರೆಲ್ಲ ನಗರಗಳಲ್ಲಿ ಕಾಮಗಾರಿ ಮಾಡಲು ಅನುದಾನದ ಕೊರತೆಯಿಲ್ಲ. ಅರಸೀಕೆರೆಯಲ್ಲಿ ಕೆಲಸ ಮಾಡಲು ಮಾತ್ರ ಅನುದಾನವಿಲ್ಲ ಎಂಬ ಉತ್ತರ ಬರುತ್ತಿದೆ. ನಿಮ್ಮ ಎಡವಟ್ಟಿನಿಂದಾಗಿ ಅರಸೀಕೆರೆಗೆ ಹೋಗದ ಪರಿಸ್ಥಿತಿಯಿದೆ. ಅಲ್ಲಿನ ಹೆಂಗಸರು ನನ್ನನ್ನು ನೋಡಿದರೆ, ಬೈಯುತ್ತಾರೆ. ಒಳಚರಂಡಿಯೂ ಬೇಡ, ಏನೂ ಬೇಡ ಮೊದಲು ಕಿತ್ತುಕೊಂಡು ಹೋಗಿ ಎನ್ನುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net