ಪಾಕಿಸ್ತಾನ ಬೆಹುಗಾರಿಕೆ ಕೇಸ್​ನಲ್ಲಿ ಖುಲಾಸೆಗೊಂಡ ವ್ಯಕ್ತಿಯನ್ನು ನ್ಯಾಯಧೀಶರನ್ನಾಗಿ ನೇಮಿಸಿ: ಹೈಕೋರ್ಟ್​​ ಸೂಚನೆ | Court

by (11)
Published on

ಕಾನ್ಪೂರ್​: ಪಾಕಿಸ್ತಾನ ಬೆಹುಗಾರಿಕೆ ಮತ್ತು ದೇಶ ದ್ರೋಹದ ಆರೋಪದ ಮೇಲೆ ಎರಡು ವಿಚಾರಣೆಗಳನ್ನು ಎದುರಿಸಿದ ಮೇಲೆ ಸರ್ಕಾರಿ ನೇಮಕಾತಿ ನಿರಾಕರಿಸಿದ ವ್ಯಕ್ತಿಯನ್ನು ಹೆಚ್ಚುವರಿ ನ್ಯಾಯಧೀಶರನ್ನಾಗಿ ನೇಮಿಸುವಂತೆ ಅಲಹಬಾದ್​ ಹೈಕೋರ್ಟ್(Court)​ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.

ಅರ್ಜಿದಾರ ಪ್ರದೀಪ್ ಕುಮಾರ್ ಅವರಿಗೆ ಜನವರಿ 15, 2025 ರೊಳಗೆ ನೇಮಕಾತಿ ಪತ್ರವನ್ನು ನೀಡುವಂತೆ ನ್ಯಾಯಾಲಯವು ರಾಜ್ಯಸರ್ಕಾರಕ್ಕೆ ಸೂಚಿಸಿದೆ.

ಕುಮಾರ್ ಯುಪಿ ಉನ್ನತ ನ್ಯಾಯಾಂಗ ಸೇವೆ (ನೇರ ನೇಮಕಾತಿ) ಪರೀಕ್ಷೆ, 2016 ರ ಅಡಿಯಲ್ಲಿ ಯುಪಿ ಉನ್ನತ ನ್ಯಾಯಾಂಗ ಸೇವೆಗೆ ಆಯ್ಕೆಗಾಗಿ ಅರ್ಜಿ ಸಲ್ಲಿಸಿದ್ದರು.ಅವರು 2017 ರಲ್ಲಿ ಉನ್ನತ ನ್ಯಾಯಾಂಗ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದರು.

ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೌಮಿತ್ರಾ ದಯಾಳ್ ಸಿಂಗ್ ಮತ್ತು ಡೊನಾಡಿ ರಮೇಶ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, “ಅರ್ಜಿದಾರರು ಎದುರಿಸಿದ ಎರಡು ಕ್ರಿಮಿನಲ್ ವಿಚಾರಣೆಗಳಲ್ಲಿ ಯಾವುದೇ ಸತ್ಯದ ಅಂಶ ಕಂಡುಬಂದಿಲ್ಲ ಎಂದು ಅವರನ್ನು ಗೌರವಯುತವಾಗಿ ಖುಲಾಸೆಗೊಳಿಸಲಾಗಿದೆ''. ಹೀಗಾಗಿ, ನೇಮಕಾತಿಗೆ ಕುಮಾರ್ ಅರ್ಹರು ಎಂದು ಪೀಠ ಹೇಳಿದೆ.

ಪಾಕಿಸ್ತಾನ ಬೆಹುಗಾರಿಕೆ ಮತ್ತು ದೇಶ ದ್ರೋಹದ ಆರೋಪದ ಕೇಸ್​ನಲ್ಲಿ ಮಾರ್ಚ್ 6, 2014 ರಂದು ಕಾನ್ಪುರ ನಗರದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ವಿಚಾರಣೆಯಲ್ಲಿ ಕುಮಾರ್ ಅವರನ್ನು ಖುಲಾಸೆಗೊಳಿಸಿತ್ತು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net