ಎನ್​ಸಿಇಆರ್​ಟಿಯಲ್ಲಿ ಪ್ರಾಧ್ಯಾಪಕರಾಗಲು ಅವಕಾಶ

Education 1 Feb 20
Published on

ನವದೆಹಲಿ: ಎನ್​ಸಿಇಆರ್​ಟಿಯಲ್ಲಿ 266 ಅಕಡೆಮಿಕ್ (ಗ್ರೂಪ್ ಎ)ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಾಧ್ಯಾಪಕ- 38, ಸಹ ಪ್ರಾಧ್ಯಾಪಕ- 83, ಸಹಾಯಕ ಪ್ರಾಧ್ಯಾಪಕ 142, ಲೈಬ್ರರಿಯನ್-1 ಹಾಗೂ ಅಸಿಸ್ಟೆಂಟ್ ಲೈಬ್ರರಿಯನ್ 2 ಹುದ್ದೆಗಳಿವೆ.

ವಿದ್ಯಾರ್ಹತೆ, ವಯೋಮಿತಿ ಇತ್ಯಾದಿ ಮಾನದಂಡಗಳು ಯುಜಿಸಿ/ ಎನ್​ಸಿಇಆರ್​ಟಿ, ಭಾರತ ಸರ್ಕಾರದ ನಿಯಮಾನುಸಾರ ಇರುತ್ತವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 3 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ http://recruitment.ncert.gov.in/ ವೆಬ್​ಸೈಟ್ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net