

ನವದೆಹಲಿ: ದಿ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್ಸಿಇ) ಜುಲೈ 10 ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ 10 ನೇ ತರಗತಿ, 12 ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲಿದೆ.
10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಐಸಿಎಸ್ಇ, ಐಎಸ್ಸಿ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ‘cisce.org’, ಮತ್ತು ‘results.cisce.org’ ನಲ್ಲಿ ಪರಿಶೀಲಿಸಬಹುದು.
ಐಸಿಎಸ್ಇ (10 ನೇ ತರಗತಿ) ಮತ್ತು ಐಎಸ್ಸಿ (12 ನೇ ತರಗತಿ) ಪರೀಕ್ಷೆಗಳ ಫಲಿತಾಂಶಗಳನ್ನು ಕೌನ್ಸಿಲ್ನ ‘ಕರಿಯರ್’ ಪೋರ್ಟಲ್ ನಲ್ಲಿ ಮತ್ತು ಎಸ್ಎಂಎಸ್ ಮೂಲಕ ಬಿಡುಗಡೆ ಮಾಡಲಾಗುತ್ತದೆ.
CISCE ನೀಡಿದ ಅಧಿಸೂಚನೆಯ ಪ್ರಕಾರ, ಶಾಲೆಗಳು ಪ್ರಾಂಶುಪಾಲರ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಮಂಡಳಿಯ ಕರಿಯರ್ ಪೋರ್ಟಲ್ ನಲ್ಲಿ ಲಾಗ್ ಇನ್ ಆಗುವ ಮೂಲಕ ಫಲಿತಾಂಶಗಳನ್ನು ನೋಡಬಹುದು. ಹೆಚ್ಚಿನ ಮಾಹಿತಿಗೆ ಅದೇ ವೆಬ್ಸೈಟ್ ನೋಡಬಹುದು ಎಂದು ಪ್ರಕಟಣೆ ತಿಳಿಸಿದೆ.