ಕೆಪಿಟಿ ಪ್ರಾಂಶುಪಾಲ ಹರೀಶ್ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಎಐಸಿಟಿಇ ನವದೆಹಲಿಯಿಂದ ಮಾನ್ಯತೆ ಪಡೆದಿರುವ ನಮ್ಮ ಸಂಸ್ಥೆಯಲ್ಲಿ ಸ್ವಾಯತ್ತೆತೆಯಿಂದಾಗಿ ಕಾಲೇಜು 2-3 ವರ್ಷಗಳಿಗೊಮ್ಮೆ ತನ್ನ ಪಠ್ಯಕ್ರಮವನ್ನು ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ಪರಿಷ್ಕರಿಸಿಕೊಳ್ಳಬಹುದಾಗಿದೆ. ಕೈಗಾರಿಕಾ ಸಹಭಾಗಿತ್ವದ ಕೋರ್ಸ್ ವಿನ್ಯಾಸ, ತ್ವರಿತ ಮತ್ತು ಪಾರದರ್ಶಕ ಮೌಲ್ಯಮಾಪನ, ಗುಣಮಟ್ಟದ ಬೋಧಕರ ವರ್ಗ, ಸಂಶೋಧನೆ, ಪ್ರಾಜೆಕ್ಟ್ ಮತ್ತು ನಾವೀನ್ಯತೆಗೆ ಅವಕಾಶ, ಹೊಸ ತಂತ್ರಜ್ಞಾನ ಕೋರ್ಸುಗಳ ಪರಿಚಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮನ್ನಣೆ ಕೆಪಿಟಿ ವಿಶೇಷತೆಯಾಗಿದೆ ಎಂದರು.