

|ಸತೀಶ್ ಕಂದಗಲ್ಪುರ ಬೆಂಗಳೂರು
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ, ಬೀದಿಗಳ ಸ್ವಚ್ಛತೆ, ಬ್ಲ್ಯಾಕ್ಸ್ಪಾಟ್ವುುಕ್ತ ನಗರ ನಿರ್ವಣಕ್ಕೆ ‘ಸಾಲಿಡ್ ವೇಸ್ಟ್ ಮ್ಯಾನೇಜ್ವೆುಂಟ್’ (ಎಸ್ಡಬ್ಲ್ಯುಎಂ) ಆಪ್ ಅಭಿವೃದ್ಧಿ ಮಾಡಲಾಗಿದೆ. ನಗರದಲ್ಲಿ ಪ್ರತಿನಿತ್ಯ ಸುಮಾರು 5 ಸಾವಿರ ಟನ್ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಆದರೆ, ಹಸಿಕಸ ಮತ್ತು ಒಣ ಕಸದ ಸಂಗ್ರಹ ಯೋಜನೆ ಪಾಲಿಕೆ ವ್ಯಾಪ್ತಿಯಲ್ಲಿ ಆರಂಭವಾಗಿ ಮೂರು ವರ್ಷಗಳು ಕಳೆದರೂ ಶೇ.100 ಜಾರಿಗೊಳಿಸುವಲ್ಲಿ ವಿಫಲವಾಗಿದೆ.
ಹಸಿಕಸ ಸಂಗ್ರಹಣೆಗೆ ಪ್ರತಿನಿತ್ಯ ಆಟೋ, ಟಿಪ್ಪರ್ ಮನೆಬಾಗಿಲಿಗೆ ಬರುತ್ತವೆ. ಇನ್ನು ಒಣಕಸ ಸಂಗ್ರಹಣೆಗೆ ವಾರದಲ್ಲಿ 2 ಬಾರಿ ವಾಹನ ಬರುತ್ತವೆಯಾದರೂ ಸೂಕ್ತ ಸಮಯ ನಿಗದಿಯಿಲ್ಲ. ವಿವಿಧ ಉದ್ಯೋಗಕ್ಕೆ ಹೋಗುವವರು ಮತ್ತು ಸಂಪ್ರದಾಯ ಪಾಲನೆ ಹಿನ್ನೆಲೆಯಲ್ಲಿ ಕಸವನ್ನು ಮನೆಯಲ್ಲಿ ಇಟ್ಟುಕೊಳ್ಳದೆ ಬೀದಿಗೆ ತಂದು ಸುರಿಯುತ್ತಾರೆ. ಇದರಿಂದ ಬ್ಲ್ಯಾಕ್ಸ್ಪಾಟ್ಸಂಖ್ಯೆಯೂ ಅಧಿಕವಾಗುತ್ತಿದೆ. ಇದನ್ನು ನಿವಾರಣೆ ಮಾಡುವ ದೃಷ್ಟಿಯಿಂದ ತ್ಯಾಜ್ಯ ನಿರ್ವಹಣೆಯಲ್ಲಿ ತಾಂತ್ರಿಕತೆ ಬಳಸಿಕೊಳ್ಳಲು ಮುಂದಾಗಿದೆ.
ಆಟೋ ಟಿಪ್ಪರ್ ಮಾಹಿತಿ: ಪಾಲಿಕೆಯಿಂದ ಅಭಿವೃದ್ಧಿ ಪಡಿಸುತ್ತಿರುವ ಎಸ್ಡಬ್ಲ್ಯುಎಂ ಆಪ್ ಅನ್ನು ಗೂಗಲ್ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಆಪ್ಗೆ ನೋಂದಣಿ ಮಾಡಿಕೊಂಡು ಅದರ ಮೂಲಕ ತ್ಯಾಜ್ಯ ಸಂಗ್ರಹಣೆ ಮಾಡುವ ಆಟೋ ಟಿಪ್ಪರ್ಗಳು ಯಾವ ಭಾಗದಲ್ಲಿದೆ. ಆಪ್ ಬಳಕೆದಾರರ ಮನೆಗೆ ಯಾವ ಸಮಯಕ್ಕೆ ಬರಲಿದೆ ಎಂಬುದರ ಬಗ್ಗೆ ರಿಯಲ್ ಟೈಮ್ ಜಿಪಿಎಸ್ ಲೊಕೇಶನ್ ಆಧಾರಿತ ಮಾಹಿತಿ ಲಭ್ಯವಾಗಲಿದೆ. ಇದಕ್ಕೆ ಅನುಕೂಲವಾಗುವಂತೆ ಪಾಲಿಕೆಯಲ್ಲಿ ಕಸ ಸಂಗ್ರಹಿಸುವ ಶೇ. 60ಕ್ಕೂ ಅಧಿಕ ಆಟೋಟಿಪ್ಪರ್ಗಳಿಗೆ ಜಿಪಿಎಸ್ ಅಳವಡಿಕೆ ಮಾಡಲಾಗಿದೆ. ವಾರ್ಡ್ ವಾರು ಮನೆ-ಮನೆಗೆ ಬರುವ ಚಾಲಕರು ಮತ್ತು ವಾರ್ಡ್ನ ಮೇಲ್ವಿಚಾರಕರ ಸಂಖ್ಯೆಯನ್ನೂ ಆಪ್ನಲ್ಲಿ ಕೊಡಲಾಗುತ್ತದೆ. ಯಾವುದೇ ದೂರುಗಳಿದ್ದರೂ ಆಪ್ ಮೂಲಕವೇ ದಾಖಲಿಸಬಹುದು. ಯಾವುದೇ ದೂರು ಇದ್ದರೂ ಆಪ್ ಮೂಲಕವೇ ದಾಖಲಿಸಬೇಕು.
ನಗರದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ಬ್ಲ್ಯಾಕ್ಸ್ಪಾಟ್ ನಿಮೂಲನೆ ದೃಷ್ಟಿಯಿಂದ ಆಪ್ ಅಭಿವೃದ್ಧಿ ಮಾಡಲಾಗಿದೆ. ಪ್ರಸ್ತುತ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಮತ್ತು ಮಾರ್ಷಲ್ಗಳು ಆಪ್ ಅನ್ನು ಪ್ರಾಯೋಗಿಕವಾಗಿ ಬಳಸುತ್ತಿದ್ದು, ಶೀಘ್ರ ಜನರ ಬಳಕೆಗೆ ಮುಕ್ತಗೊಳಿಸಲಾಗುತ್ತದೆ.
|ಹರೀಶ್ಕುಮಾರ್ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ
ವಾರದೊಳಗೆ ಬ್ಲ್ಯಾಕ್ಸ್ಪಾಟ್ ತೆರವು: ನಗರದಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಕಾರ್ಯ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ ಬ್ಲ್ಯಾಕ್ಸ್ಪಾಟ್ಗಳ ಸಂಖ್ಯೆ 1,500ರ ಗಡಿ ದಾಟಿದೆ. ಪಾಲಿಕೆ ಮಾರ್ಷಲ್ಗಳು ಮಾಸ್ಕ್ ಹಾಕದವರಿಗೆ ದಂಡ ವಿಧಿಸಲು ತೆರಳುತ್ತಿದ್ದು, ಬ್ಲ್ಯಾಕ್ಸ್ಪಾಟ್ ಗುರುತಿಸಿ ನಿರ್ವಹಣೆ ಹಾಗೂ ಕಸ ಸುರಿಯುವವರಿಗೆ ದಂಡ ವಿಧಿಸುವ ತಮ್ಮ ಮೂಲ ಕಾರ್ಯವನ್ನೇ ಮರೆತಿದ್ದರು. ಈಗ ಕೋವಿಡ್ ಸೋಂಕು ತ್ಯಾಜ್ಯ ನಿಮೂಲನೆ ಕಾರ್ಯಕ್ಕೆ ಹೆಚ್ಚಿನ ಅವಧಿ ಕೆಲಸ ಮಾಡಲು ಸೂಚಿಸಲಾಗಿದೆ. ಸೋಮವಾರದಿಂದ ಗುರುವಾರದವರೆಗೆ ತಮ್ಮ ವಾರ್ಡ್ ವ್ಯಾಪ್ತಿಯ ಬ್ಲ್ಯಾಕ್ಸ್ಪಾಟ್ಗಳನ್ನು ಗುರುತಿಸಿ ಆಪ್ಗೆ ಅಪ್ಲೋಡ್ ಮಾಡಬೇಕು. ಶುಕ್ರವಾರ ಸಿದ್ಧತೆ ಮಾಡಿಕೊಂಡು, ಶನಿವಾರ ಸ್ವಚ್ಛತೆ ಮಾಡಬೇಕು. ಭಾನುವಾರ ಬ್ಲ್ಯಾಕ್ಸ್ಪಾಟ್ ತೆರವುಗೊಳಿಸಿದ ಜಾಗದಲ್ಲಿ ರಂಗೋಲಿ ಹಾಕಿ ಜನಜಾಗೃತಿ ಮೂಡಿಸುವ ಯೋಜನೆ ರೂಪಿಸಲಾಗಿದೆ.
ವಾಹನ ಟೆಂಡರ್ ಸಮಸ್ಯೆ: ನಗರದಲ್ಲಿ ಬ್ಲ್ಯಾಕ್ಸ್ಪಾಟ್ ನಿಮೂಲನೆಗೆ ಬಿಬಿಎಂಪಿ ಪ್ರತ್ಯೇಕ ವಾಹನ ಸಿದ್ಧಪಡಿಸಿದೆ. ಈ ವಾಹನಗಳು ಆಪ್ನಲ್ಲಿ ನಮೂದಾಗುವ ದೂರುಗಳನ್ನು ಆಧರಿಸಿ ಕೆಲಸ ಮಾಡಲಿವೆ. ವಾಹನ ನಿರ್ವಹಣೆಯ ಟೆಂಡರ್ ಯಾರಿಗೆ ಕೊಡಬೇಕು ಎಂಬುದೇ ಸವಾಲಾಗಿದೆ. ಪ್ರಸ್ತುತ ವಾರ್ಡ್ ವಾರು ಕಸ ಸಂಗ್ರಹಿಸುವ ಗುತ್ತಿಗೆದಾರರು ಈ ವಾಹನ ಪಡೆಯಲು ಮುಂದಾಗುತ್ತಿಲ್ಲ. ಹೀಗಾಗಿ, ಪ್ರತ್ಯೇಕ ಟೆಂಡರ್ ಕರೆದು ಬ್ಲ್ಯಾಕ್ಸ್ಪಾಟ್ ತೆರವು ಮೊಬೈಲ್ ವಾಹನದ ಬಳಕೆ ಮಾಡಲು ಪಾಲಿಕೆ ಸಿದ್ಧತೆ ನಡೆಸಿದೆ.
ವಾರ್ಡ್ವಾರು ಕಸ ಸಂಗ್ರಹಣಾ ಕೇಂದ್ರ: ನಗರದಲ್ಲಿ ಬ್ಲ್ಯಾಕ್ಸ್ಪಾಟ್ ನಿಮೂಲನೆ ಜತೆಗೆ ಎಲ್ಲ ಮಾದರಿಯ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಸ್ಥಳಾವಕಾಶ ಒದಗಿಸಬೇಕಿದೆ. ಆಟೋ ಟಿಪ್ಪರ್ಗಳು ಸಂಗ್ರಹಿಸದ ಇ-ತ್ಯಾಜ್ಯ, ಕಟ್ಟಿಗೆ, ದಿಂಬು, ಹಾಸಿಗೆ ಮತ್ತು ಪ್ರಾಣಿಗಳ ಮಾಂಸದ ತ್ಯಾಜ್ಯವನ್ನು ಕೊಡಲು ವಾರ್ಡ್ಗೊಂದು ಸಂಗ್ರಹಣಾ ಕೇಂದ್ರ ತೆರೆಯಲಾಗುತ್ತದೆ. ಅಲ್ಲಿಗೆ ಜನರು ಹೋಗಿ ತಮ್ಮ ತ್ಯಾಜ್ಯವನ್ನು ಸುರಿದು ಬರಬೇಕು. ಜತೆಗೆ, ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಲು ದೂರದ ಪ್ರದೇಶಗಳಿಗೆ ಹೋಗಬೇಕಿದೆ. ಇದನ್ನು ತಪ್ಪಿಸಿ ವಲಯಕ್ಕೊಂದು ಕಟ್ಟಡ ತ್ಯಾಜ್ಯ ವಿಲೇವಾರಿ ಸ್ಥಳವನ್ನು ನಿಗದಿ ಮಾಡಲಾಗುತ್ತದೆ. ಈ ಸ್ಥಳದ ಬಗ್ಗೆಯೂ ಜಿಪಿಎಸ್ ಲೊಕೇಶ್ ಆಧಾರಿತ ಮಾಹಿತಿಯನ್ನು ಎಸ್ಡಬ್ಲ್ಯುಎಂ ಆಪ್ನಲ್ಲಿ ಸೇರ್ಪಡೆ ಮಾಡಲಾಗುತ್ತದೆ ಎಂದು ಪಾಲಿಕೆ ಅಧಿಕಾರಿ ತಿಳಿಸಿದರು.