ವೈಎಸ್​ಆರ್​ ಕಾಂಗ್ರೆಸ್​ ತೊರೆಯುತ್ತಾರಾ ರೋಜಾ? ಪಕ್ಷ ಬದಲಾವಣೆ ಬಗ್ಗೆ ಮಾಜಿ ಸಚಿವೆ ಏನಂದ್ರು ಗೊತ್ತಾ?

roja
Published on

ತಿರುಪತಿ: ಪಕ್ಷ ಬದಲಿಸಿ ತಮಿಳು ರಾಜಕೀಯಕ್ಕೆ ಹೋಗುವ ಉದ್ದೇಶ ನನಗಿಲ್ಲ ಎಂದು ಈ ಕುರಿತು ಎದ್ದಿರುವ ವದಂತಿಗಳಿಗೆ ಖ್ಯಾತ ನಟಿ, ರಾಜಕಾರಣಿ ರೋಜಾ ತೆರೆ ಎಳೆದರು.

ಆಂಧ್ರದ ಮಾಜಿ ಸಚಿವೆ, ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ಫೈರ್​ಬ್ರಾಂಡ್​ ಎಂದೇ ಖ್ಯಾತರಾಗಿದ್ದ ನಟಿ ಆರ್‌.ಕೆ.ರೋಜಾ ತಿರುಮಲೆಗೆ ಭೇಟಿ ನೀಡಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಬಳಿಕ ತನ್ನ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷ ಬದಲಾಯಿಸುವ ಇರಾದೆ ನನಗಿಲ್ಲ. 2014-19ರಲ್ಲೂ ಹಲವರು ಹೀಗೆಯೇ ವದಂತಿಗಳನ್ನು ಹಬ್ಬಿಸಿದ್ದರು ಎಂದು ಹೇಳಿದರು.

ಪಕ್ಷ ಬಿಡುವವರಿಂದ ಪಕ್ಷಕ್ಕೆ ನಷ್ಟವಿಲ್ಲ. ಪಕ್ಷ ಬದಲಿಸುವವರಿಗೆ ಬೇರೆ ಪಕ್ಷಕ್ಕೆ ಹೋದರೂ ಗೌರವ ಸಿಗುವುದಿಲ್ಲ. ಅವರು ಐತಿಹಾಸಿಕ ವ್ಯಕ್ತಿಗಳಾಗಿ ಉಳಿಯುತ್ತಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net