

ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ಯಾರೋ ಎಲಾನ್ ಮಸ್ಕ್ ಹೆಸರಿನಲ್ಲೇ ಟ್ವಿಟರ್ ಖಾತೆ ತೆರೆದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. ಕೆಲವು ದಿನಗಳ ಹಿಂದ ಕಂಗನಾ ರಣಾವತ್ ಹೆಸರಿನಲ್ಲೂ ಒಂದು ಖಾತೆ ತೆರೆದು ಆಕೆ ಮತ್ತೆ ಟ್ವಿಟರ್ಗೆ ಮರಳಿದಂತೆ ಬಿಂಬಿಸಲಾಗಿತ್ತು. ಮಾತ್ರವಲ್ಲ ಸ್ಯಾಂಡಲ್ವುಡ್ನಲ್ಲೂ ಯಾರೋ ಅಭಿಷೇಕ್ ಅಂಬರೀಷ್ ಹೆಸರಿನಲ್ಲಿ ಟ್ವಿಟರ್ ಖಾತೆ ತೆರೆದಿದ್ದು, ಅದು ಸುಮಲತಾ ಅಂಬರೀಷ್ ಗಮನಕ್ಕೆ ಬಂದು, ಆಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.
ಇವು ಕೆಲವು ಉದಾಹರಣೆಗಳಷ್ಟೇ.. ಹೀಗೆ ಯಾರದ್ದೋ ಹೆಸರಿನಲ್ಲಿ ಇನ್ಯಾರೋ ಟ್ವಿಟರ್ ಖಾತೆ ತೆರೆದು ಟ್ವೀಟ್ ಮಾಡುತ್ತಿರುವ ಪ್ರಕರಣಗಳು ಹಲವಾರಿವೆ. ಆದರೆ ಇನ್ನುಮುಂದೆ ಅಂಥ ಖಾತೆಗಳು ಶಾಶ್ವತವಾಗಿ ಅಮಾನತುಗೊಳ್ಳಲಿವೆ ಎಂಬುದನ್ನು ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ.
ಯಾವುದೇ ಟ್ವಿಟರ್ ಹ್ಯಾಂಡಲ್ ಮೂಲಕ ಇನ್ನೊಬ್ಬರ ಸೋಗಿನಲ್ಲಿ ಟ್ವೀಟ್ ಮಾಡುತ್ತಿದ್ದರೆ ಮತ್ತು ಇನ್ನೊಬ್ಬರ ಹೆಸರಿನಲ್ಲಿ ಖಾತೆ ತೆರೆದಿದ್ದರೂ 'ಪರೋಡಿ' ಖಾತೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿರದಿದ್ದರೆ ಅಂಥ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುವುದು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.