

ಬೆಂಗಳೂರು: ಸಂಸದೆಯೂ ಆಗಿರುವ ನಟಿ ಸುಮಲತಾ ಅಂಬರೀಷ್ ಇದೀಗ ತಮ್ಮ ಮಗನ ಪರವಾಗಿ ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ದಾರಿ ತಪ್ಪಿಸುವುದು ಸರಿಯಲ್ಲ ಎಂಬ ಕಿವಿಮಾತನ್ನು ಕೂಡ ಹೇಳಿದ್ದಾರೆ.
ಸಂಸದೆ ಸುಮಲತಾ ಹೀಗೊಂದು ಮನವಿ ಮಾಡಿಕೊಳ್ಳಲು ಪ್ರಮುಖ ಕಾರಣ ಒಂದು ಟ್ವೀಟ್. ಇಂದು ತೆರೆ ಕಂಡಿರುವ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಕಾಂತಾರ ಸಿನಿಮಾಗೆ ಮೆಚ್ಚುಗೆ ಸೂಚಿಸಿ ಅಭಿಷೇಕ್ ಅಂಬರೀಷ್ ಎಂಬ ಟ್ವಿಟರ್ ಹ್ಯಾಂಡಲ್ನಿಂದ ಒಂದು ಟ್ವೀಟ್ ಆಗಿದ್ದರಿಂದ ಸುಮಲತಾ ಹೀಗೊಂದು ಮನವಿ ಮಾಡಿಕೊಂಡಿದ್ದಾರೆ.
ಇದು ಯಾರ ಟ್ವಿಟರ್ ಹ್ಯಾಂಡಲ್ ಎಂಬುದಾಗಿ ನನಗೆ ಗೊತ್ತಿಲ್ಲ. ಅಭಿಷೇಕ್ ಅಂಬರೀಷ್ ಟ್ವಿಟರ್ನಲ್ಲಿ ಇಲ್ಲ. ಹೀಗಾಗಿ ಈ ಟ್ವಿಟರ್ ಹ್ಯಾಂಡಲ್ ಹೆಸರು ಬದಲಿಸಿಕೊಳ್ಳಿ ಅಥವಾ ಇದು ಫ್ಯಾನ್ ಪೇಜ್ ಆಗಿದ್ದರೆ ಅದನ್ನು ನಮೂದಿಸಿ ಎಂದು ಕೋರಿಕೊಂಡಿರುವ ಸುಮಲತಾ, ದಾರಿ ತಪ್ಪಿಸುವುದು ಸರಿಯಲ್ಲ ಎಂದೂ ಹೇಳಿದ್ದಾರೆ.