More

    ಡಿ.ಕೆ.ಶಿವಕುಮಾರ್ ಡ್ಯಾನ್ಸ್ ಚಿತ್ರೀಕರಣ​ಕ್ಕೆ ಅಡ್ಡಿ, ಡ್ರೋಣ್ ಕ್ಯಾಮೆರಾ ಕಿತ್ತೊಯ್ದ ರಾಹುಲ್ ಭದ್ರತಾ ಸಿಬ್ಬಂದಿ

    ಚಾಮರಾಜನಗರ: ಕಾಂಗ್ರೆಸ್​ನವರು ದೇಶಾದ್ಯಂತ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಪ್ರವೇಶಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕರುನಾಡಿಗೆ ಪ್ರವೇಶ ಮಾಡಿದ್ದಾರೆ. ಇಲ್ಲಿ ಕೆಲವೊಂದು ಕುತೂಹಲ ಕೆರಳಿಸುವಂಥ ಘಟನೆಗಳೂ ನಡೆದಿವೆ.

    ಭಾರತ್ ಜೋಡೋ ಯಾತ್ರೆ ಚಾಮರಾಜನಗರಕ್ಕೆ ತಲುಪಿದ್ದು, ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮಕ್ಕೆ ಪಾದಯಾತ್ರೆ ಮೂಲಕ ರಾಹುಲ್ ಗಾಂಧಿ ಪ್ರವೇಶ ಮಾಡಿದ್ದಾರೆ. ಪಾದಯಾತ್ರೆ ಬಳಿಕ ಇಂದು ರಾಹುಲ್ ಬೇಗೂರಿನಲ್ಲೇ ವಾಸ್ತವ್ಯ ಹೂಡಲಿದ್ದು, ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

    ಇದಕ್ಕೂ ಮುನ್ನ ಪಾದಯಾತ್ರೆಯಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಘೋಷಣೆಗಳೂ ಮೊಳಗಿದವು. ಸಿದ್ದರಾಮಯ್ಯ ಅವರನ್ನು ಸುತ್ತುವರಿದ ಅಭಿಮಾನಿಗಳು ಈ ಘೋಷಣೆಗಳನ್ನು ಕೂಗಿದರು.

    ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಡ್ಯಾನ್ಸ್​ ಮಾಡಿದರು. ಆಗ ಅವರಿಗೆ ಸಂಬಂಧಪಟ್ಟ ತಂಡದವರು ಡ್ರೋಣ್​ ಕ್ಯಾಮರಾದ ಮೂಲಕ ಆ ದೃಶ್ಯಾವಳಿ ಸೆರೆ ಹಿಡಿಯಲು ಮುಂದಾಗಿದ್ದರು. ಇದಕ್ಕೆ ರಾಹುಲ್ ಗಾಂಧಿ ಅವರ ಭದ್ರತಾ ಸಿಬ್ಬಂದಿ ಎರಡು ಸಲು ತಡೆದು ಎಚ್ಚರಿಕೆ ನೀಡಿದ್ದರೂ, ಶಿವಕುಮಾರ್ ತಂಡದವರಿಂದ ಚಿತ್ರೀಕರಣ ಮುಂದುವರದಿತ್ತು. ಕೊನೆಗೆ ರಾಹುಲ್ ಭದ್ರತಾ ಸಿಬ್ಬಂದಿ ಡ್ರೋಣ್ ಕ್ಯಾಮರಾ ಕಿತ್ತುಕೊಂಡು ಹೋದರು.

    ಭಾರತವನ್ನೇ ತಪ್ಪಾಗಿ ತೋರಿಸಿದ ಶಶಿ ತರೂರ್ ಪ್ರಣಾಳಿಕೆ!; ಜಮ್ಮು-ಕಾಶ್ಮೀರವೇ ಇರದ ನಕಾಶೆ..

    ಇದು ವಿದೇಶದಲ್ಲಿನ ಪ್ರಪ್ರಥಮ ಸ್ವಂತ ಕನ್ನಡ ಭವನ; 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts