'ಘಾಟಿ' ಮುಂದೂಡಿಕೆಗೆ 'ಸ್ವೀಟಿ' ಕಾರಣ! ಬಹುನಿರೀಕ್ಷಿತ ಚಿತ್ರ ರಿಲೀಸ್​ಗೆ ದಿನಾಂಕ ಫಿಕ್ಸ್​ ಮಾತ್ರ ಬಾಕಿ | Ghaati

ವಿಜಯವಾಣಿ (8)
Published on

Ghaati: ಕರಾವಳಿ ಬೆಡಗಿ, ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಘಾಟಿ’ ಚಿತ್ರದ ರಿಲೀಸ್​ ಪದೇ ಪದೇ ಮುಂದೂಡುತ್ತಿದೆ. ಇದು ನಟಿಯ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಬಹುನಿರೀಕ್ಷಿತ ತೆಲುಗು ಚಿತ್ರಕ್ಕೆ ಭಾರೀ ಕುತೂಹಲ ವ್ಯಕ್ತವಾಗಿದ್ದು, 'ಸ್ವೀಟಿ'ಯ ಆ ಒಂದು ನಿರ್ಧಾರವೇ ಸಿನಿಮಾದ ಮುಂದೂಡಿಕೆಗೆ ಕಾರಣ ಎಂದು ತೆಲುಗು ಸಿನಿಮಾ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಕ್ರಿಶ್ ನಿರ್ದೇಶನದ ಹಾಗೂ ಅನುಷ್ಕಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಚಿತ್ರೀಕರಣ ಸೇರಿದಂತೆ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಸಿನಿಮಾ ತೆರೆಗೆ ಅಪ್ಪಳಿಸುವುದು ಮಾತ್ರ ಬಾಕಿ ಉಳಿದಿದೆ. ಕಳೆದ ಕೆಲವು ದಿನಗಳಿಂದ ರಿಲೀಸ್ ದಿನಾಂಕ ಮುಂದೂಡಿಕೆಯಾಗಿ, ಚಿತ್ರ ಯಾವಾಗ ತೆರೆಕಾಣಲಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಈ ಮೊದಲು ಏಪ್ರಿಲ್​ 18ಕ್ಕೆ ಬಿಡುಗಡೆ ದಿನಾಂಕ ನಿಗದಿಯಾಗಿತ್ತು. ಆದರೆ, ಅದನ್ನು ಜುಲೈ 11ಕ್ಕೆ ಮುಂದೂಡಲಾಯಿತು. ಇದು ಅಂತಿಮ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಚಿತ್ರದ ವಿಎಫ್​ಎಕ್ಸ್​ ಕೆಲಸಗಳಿಂದ ಕೊನೆ ಗಳಿಗೆಯಲ್ಲಿ ರಿಲೀಸ್ ಮತ್ತೇ​ ಮುಂದೂಡಲಾಗಿದೆ. ಆದರೆ, ಯಾವ ದಿನಾಂಕಕ್ಕೆ ಎಂಬವುದು ಇನ್ನೂ ಸ್ಪಷ್ಟವಾಗಿಲ್ಲ.

ವರದಿಗಳ ಪ್ರಕಾರ, ಈ ಬಾರಿಯ ವಿಳಂಬಕ್ಕೆ ನಟಿಯೇ ಕಾರಣ. ಅನುಷ್ಕಾ ಅವರೇ ಚಿತ್ರದ ರಿಲೀಸ್​ ದಿನಾಂಕವನ್ನು ಮುಂದೂಡಲು ಚಿತ್ರತಂಡವನ್ನು ಮನವಿ ಮಾಡಿದ್ದರು. ಕೆಲವು ದೃಶ್ಯಗಳಲ್ಲಿ, ವಿಶೇಷವಾಗಿ ಅವರ ಪಾತ್ರದಲ್ಲಿನ ಒಂದಷ್ಟು ವಿಎಫ್​ಎಕ್ಸ್​ ಕೆಲಸಗಳು ಅನುಷ್ಕಾಗೆ ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಸ್ವತಃ ನಟಿಯೇ ಒಂದಷ್ಟು ಬದಲಾವಣೆಯ ಅಗತ್ಯವಿರುವ ಹಿನ್ನಲೆ ಮುಂದೂಡಿಕೆಗೆ ಕೋರಿದ್ದಾರೆ. ಪ್ರಸ್ತುತ ಕೆಲಸಗಳು ನಡೆಯುತ್ತಿದ್ದು, ಅಧಿಕೃತ ರಿಲೀಸ್ ದಿನಾಂಕ ಯಾವಾಗ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net