ಹೃದಯಾಘಾತದಿಂದ ಮೃತಪಟ್ಟವನಿಗೆ ಕರೊನಾ ದೃಢ; 37ಕ್ಕೆ ಏರಿತು ಸಾವಿನ ಸಂಖ್ಯೆ

Corona vaccine
Published on

ಉಡುಪಿ: ಕರೊನಾ ಮಹಾಮಾರಿಗೆ ಉಡುಪಿಯಲ್ಲಿ ಒಂದು ಸಾವಾಗಿದ್ದು, ರಾಜ್ಯದ ಒಟ್ಟು ಸಾವಿನ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಿಂದ ಬಂದಿದ್ದ ಈ ವ್ಯಕ್ತಿಗೆ ಮೇ 13ರಂದು ಸಂಜೆ ಹೃದಯಾಘಾತವಾಗಿತ್ತು. ಅವರನ್ನು ಕುಂದಾಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ನೋವು ಉಲ್ಬಣವಾದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿಗೆ ಸೇರಿಸಲಾಗಿತ್ತು. 13ರಂದು ಸಂಜೆಯೇ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು.

ಆದರೆ ಮೇ 14ರಂದು ನಿಧನರಾಗಿದ್ದರು. ಮಹಾರಾಷ್ಟ್ರದಿಂದ ಬಂದಿದ್ದರಿಂದ ಕರೊನಾ ಶಂಕೆ ತೀವ್ರವಾಗಿತ್ತು. ಹಾಗಾಗಿ ವ್ಯಕ್ತಿಯ ಮೃತದೇಹಕ್ಕೆ ಕರೊನಾ ಟೆಸ್ಟ್ ಮಾಡಲಾಗಿತ್ತು. ಇಂದು ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 57 ಮಂದಿ ಮತ್ತು ಸೆಕೆಂಡರಿ ಸಂಪರ್ಕಕ್ಕೆ ಬಂದಿದ್ದ 38 ವ್ಯಕ್ತಿಗಳನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಇನ್ನು ಆಸ್ಪತ್ರೆಗಳಲ್ಲಿ ವೈದ್ಯರು ಪಿಪಿಇ ಕಿಟ್​ ಧರಿಸಿಯೇ ರೋಗಿಗೆ ಚಿಕಿತ್ಸೆ ನೀಡಿದ್ದರು. ಮೃತ ವ್ಯಕ್ತಿಯ ಅಂತಿಮ ಸಂಸ್ಕಾರ ಕೊವಿಡ್​-19 ನಿಯಮಾವಳಿಗಳಂತೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net