

ಬೆಂಗಳೂರು: ಬ್ಯೂಟಿ ಪಾರ್ಲರ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆದಿದೆ ಎಂದು ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಪ್ರಕರಣದಲ್ಲಿ ಬಂಧಿತ ರಾಜಾನುಕುಂಟೆ ವೆಂಕಟೇಶ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ಇಂದಿರಾನಗರದ ಮೈಕಲ್ ಪಾಳ್ಯದ ಸಹರಾ ಇಂಟರ್‌ನ್ಯಾಷನಲ್ ಸ್ಪಾ ಎಂ.ಮಹೇಶ್ ಶೆಟ್ಟಿ ಎಂಬಾತ ಇಂದಿರಾನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ವೆಂಕಟೇಶ್ ಮತ್ತು ಇತರರ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲು ಮೇ 7ರಂದು ಸ್ಪಾಗೆ ಬಂದಿರುವ ವ್ಯಕ್ತಿಯೊಬ್ಬ ಥೆರಪಿ ಮಾಡಿಕೊಂಡು 8 ಸಾವಿರ ರೂ. ಪಾವತಿ ಮಾಡಿ ಹೋಗಿದ್ದ. ಆನಂತರ ಸ್ಪಾ ದೂರವಾಣಿಗೆ ಕರೆ ಮಾಡಿದ ವೆಂಕಟೇಶ್, ರಾಜ್ ನ್ಯೂಸ್ ಸಿಇಒ ಎಂದು ಪರಿಚಯ ಮಾಡಿಕೊಂಡು ಯಲಹಂಕ ನ್ಯೂಟೌನ್ ಹತ್ತಿರದ ಕಾಂತಿ ಸ್ಪೀಟ್ ಹತ್ತಿರ ಕರೆಸಿಕೊಂಡಿದ್ದ. ಅಲ್ಲಿಗೆ ದೂರುದಾರರು ಹೋದಾಗ ರೇಂಜ್ ರೋವರ್ ಕಾರಿಗೆ ಹತ್ತಿಸಿಕೊಂಡ ವೆಂಕಟೇಶ್, ಮೊಬೈಲ್‌ಗಳನ್ನು ಆ್ ಮಾಡಿಸಿ ನಿಮ್ಮ ಸ್ಪಾದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂದು ವಿಡಿಯೋ ತೊರಿಸಿದ್ದಾನೆ. ಇದನ್ನು ಡಿಲೀಟ್ ಮಾಡಬೇಕಾದರೆ 25 ಲಕ್ಷ ರೂ. ಕೊಡಬೇಕು.
ರಾಜ್ ನ್ಯೂಸ್‌ನಲ್ಲಿ ವೈರಲ್ ಮಾಡಿ ಹೊರ ರಾಜ್ಯದಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದಾಗಿ ಬೆದರಿಸಿದ್ದಾರೆ. ಅಷ್ಟೊಂದು ಹಣ ಇಲ್ಲ ಎಂದಾಗ 15 ಲಕ್ಷ ರೂ. ಕೊಡಬೇಕೆಂದು ತಾಕೀತು ಮಾಡಿದ್ದಾರೆ. ಕೊನೆಗೆ ಆ ಕ್ಷಣದಲ್ಲಿ 1 ಲಕ್ಷ ರೂ. ಅನ್ನು ೆನ್ ಪೇ ಮಾಡಿಕೊಂಡ ವೆಂಕಟೇಶ್, ಉಳಿಕೆ ಹಣವನ್ನು ತಂದು ಕೊಡುವಂತೆ ಹೇಳಿ ಕಳುಹಿಸಿದ್ದ. ಮಾರನೇ ದಿನ ಸ್ಪಾ ವ್ಯವಸ್ಥಾಪಕನಿಗೆ ಕರೆ ಮಾಡಿದ ವೆಂಕಟೇಶ್, ನಿಮಗೆ ತೊಂದರೆ ಕೊಡುವುದಿಲ್ಲ. ಪ್ರತಿ ತಿಂಗಳು ನಮಗೆ 20 ಸಾವಿರ ರೂ. ೆನ್ ಪೇ ಮಾಡಬೇಕೆಂದು ಷರತ್ತು ವಿಧಿಸಿದ್ದ.
ಇಲ್ಲವಾದರೆ, ಪೊಲೀಸರಿಗೆ ದೂರು ಕೊಟ್ಟು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದ. ನೊಂದ ಮಹೇಶ್ ಶೆಟ್ಟಿ, ಈ ಕುರಿತು ಇಂದಿರಾನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ತನಿಖೆ ಮುಂದುವರಿದಿದೆ. ವೆಂಕಟೇಶ್ ಗ್ಯಾಂಗ್‌ನಿಂದ ಮತ್ತಷ್ಟು ಮಂದಿ ಸುಲಿಗೆಗೆ ಒಳಗಾಗಿದ್ದು, ನೊಂದವರು ದೂರು ಕೊಟ್ಟರೇ ಎ್ಐಆರ್ ದಾಖಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.