ಹೈನುಗಾರಿಕೆ ಕ್ಷೇತ್ರದಿಂದ ಸ್ವಾವಲಂಬಿ ಬದುಕು

pandeshwara
ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕೆ.ಎಂ ಎಫ್ ವಿಸ್ತರ್ಣಾಧಿಕಾರಿ ಸರಸ್ವತಿ, ಸಂಘದ ಅಧ್ಯಕ್ಷೆ ಶಾಂತ.ಎಸ್.ಭಟ್, ಸಂಘದ ಉಪಾಧ್ಯಕ್ಷೆ ಜೋಡಿತ್ ಪಿ ಕಾರ್ಡು, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು
Published on

ಕೋಟ: ಹೈನುಗಾರಿಕೆ ಕ್ಷೇತ್ರದ ಮೂಲಕ ಸ್ವಾವಲಂಬಿ ಬದಕು ಸಾಧ್ಯ. ಕೃಷಿ ಕಾಯಕದ ಜತೆ ಹೈನುಗಾರಿಕೆ ಮಂಚೂಣಿಗೆ ನಿಲ್ಲುತ್ತಿದೆ. ಪ್ರಸ್ತುತ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಅವಲಂಬಿತವಾಗಿದ್ದು ಜೀವನೋಪಾಯ ಕಟ್ಟಿಕೊಳ್ಳಲು ಸಾಧ್ಯ ಎಂಬುವುದನ್ನು ಹೈನುಗಾರರು ಸಾಬೀತುಪಡಿಸಿದ್ದಾರೆ ಎಂದು ಕೆ.ಎಂ.ಎಫ್ ವಿಸ್ತರ್ಣಾಧಿಕಾರಿ ಸರಸ್ವತಿ ಹೇಳಿದರು.

ಸಂಘದ ಕಚೇರಿಯಲ್ಲಿ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ 2023-24 ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗುರುವಾರ ಹೈನುಗಾರರಿಗೆ ಒಕ್ಕೂಟದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಸಂಘ ಅಧ್ಯಕ್ಷೆ ಶಾಂತಾ ಎಸ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಘ ವರದಿ ವರ್ಷದಲ್ಲಿ 254970.35 ಲಾಭಗಳಿಸಿದ್ದು, ಉತ್ಪಾದಕರಿಗೆ 121812.08 ಬೋನಸ್ ನೀಡಿದ್ದು ಶೇ.20 ಡಿವಿಡೆಂಡ್ ವಿತರಿಸಲಾಯಿತು.

ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಕ್ರಿಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಜೋಡಿತ್ ಪಿ ಕಾರ್ಡು ಸ್ವಾಗತಿಸಿದರು. ಸಿಇಇ ಶ್ಯಾಮಲಾ ವರದಿ ವಾಚಿಸಿದರು. ಸಿಬ್ಬಂದಿ ಸುಜಾತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net