ಅಬ್ಬನಡ್ಕದಲ್ಲಿ ಕೃಷ್ಣವೇಷ ಸ್ಪರ್ಧೆ

abbanadka
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಜೇಸಿಐ ಬೆಳ್ಮಣ್, ಯುವ ಜೇಸಿ ವಿಭಾಗ, ಮಹಿಳಾ ಜೇಸಿ ವಿಭಾಗದ ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ಕೃಷ್ಣ ವೇಷ ಸ್ಪರ್ಧೆ ನಡೆಯಿತು.
Published on

ಕಾರ್ಕಳ: ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಜೇಸಿಐ ಬೆಳ್ಮಣ್, ಯುವ ಜೇಸಿ ವಿಭಾಗ, ಮಹಿಳಾ ಜೇಸಿ ವಿಭಾಗದ ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ ಜರುಗಿತು. ಸ್ಪರ್ಧೆಯಲ್ಲಿ 110 ಮಕ್ಕಳು ಭಾಗವಹಿಸಿದ್ದರು.

ಜೇಸಿಐ ವಲಯಾಧಿಕಾರಿ ಪ್ರಶಾಂತ್ ಕುಮಾರ್ ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ಬೆಳ್ಮಣ್ ಜೇಸಿಐ ಅಧ್ಯಕ್ಷೆ ಸರಿತಾ ದಿನೇಶ್ ಸುವರ್ಣ ಅವರ ಜಂಟಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.

ಜೇಸಿಐ ವಲಯ ಉಪಾಧ್ಯಕ್ಷ ವಿಘ್ನೇಶ್ ಪ್ರಸಾದ್ ರಾವ್, ಬೈಲೂರು ಕ್ಷೇತ್ರದ ನಿಕಟಪೂರ್ವ ಜಿಪಂ ಸದಸ್ಯ ಸುಮಿತ್ ಶೆಟ್ಟಿ ಕೌಡೂರು, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಸಂಕಲಕರಿಯ ಅಮ್ಮ ಕ್ಯಾಟರರ್ಸ್‌ ಮಾಲೀಕ ಸೋಮನಾಥ ಪೂಜಾರಿ, ಬೋಳ ಪಡುಗಿರಿ ಮೋಹನ್ ಶೆಟ್ಟಿ, ಬೋಳ ದಿನೇಶ್ ಆಚಾರ್ಯ, ಮಂಜರಪಲ್ಕೆ ಮಂಜುನಾಥ ಕನ್ಟ್ರೆಕ್ಷನ್ ಮಾಲೀಕ ರೇಣು ಪಕಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ.ಪೂಜಾರಿ, ಸ್ಥಾಪಕಾಧ್ಯಕ್ಷ ವಿಠಲ ಮೂಲ್ಯ, ಕಾರ್ಯದರ್ಶಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ನಿರ್ದೇಶಕಿ ಸಂಧ್ಯಾ ಶೆಟ್ಟಿ, ಬೆಳ್ಮಣ್ ಜೇಸಿಐ ಕಾರ್ಯದರ್ಶಿ ಸೌಜನ್ಯ ಕೋಟ್ಯಾನ್, ಮಹಿಳಾ ಜೇಸಿ ಸಂಯೋಜಕಿ ಶ್ವೇತಾ ಆಚಾರ್ಯ ಉಪಸ್ಥಿತರಿದ್ದರು. ಹೆಬ್ರಿ ಅಮೃತಾ ಭಾರತಿ ವಿದ್ಯಾ ಸಂಸ್ಥೆ ಉಪನ್ಯಾಸಕ ವೀಣೇಶ್ ಅಮೀನ್ ನಿರೂಪಿಸಿದರು. ನಿಟ್ಟೆ ವಿದ್ಯಾ ಸಂಸ್ಥೆ ಸುರೇಖಾ ಶೆಟ್ಟಿ, ವಂಜಾರಕಟ್ಟೆ ವಿದ್ಯಾ ಸಂಸ್ಥೆ ಆಶಾ ತೀರ್ಪುಗಾರರಾಗಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net