

ಕಾರ್ಕಳ: ಮಾಹೆಯಲ್ಲಿ ಮೆಟೀರಿಯಲ್ ಸೈನ್ಸ್ ವಾಹಿನಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್.ಡಿ ಅಧ್ಯಯನ ನಡೆಸಿದ ಬೆಳ್ಮಣ್ ಸೌರಭ್ ತಂತ್ರಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಳ್ಮಣ್ ನಡಿಗುತ್ತು ತಂತ್ರಿ ಕುಟುಂಬದ ಸತೀಶ್ ತಂತ್ರಿ ಹಾಗೂ ಲಕ್ಷ್ಮೀ ತಂತ್ರಿ ದಂಪತಿ ಪುತ್ರ. ಸಿಂಥೆಸಿಸ್ ಆ್ಯಂಡ್ ಕ್ಯಾರಕ್ಟರೈಸೇಫನ್ ಆಫ್ ಮೋಡಿಫೈಡ್ ಟಿ6-ಎಎ7075 ಮ್ಯಾಟಿಕ್ಸ್ ಬೇಸಡ್ ಗ್ರಾನೈಟ್ ಪೌಡರ್ ಆ್ಯಂಡ್ ಸಿಲಿಕಾನ್ ನೈಟ್ರೈಡ್ ಪರ್ಟಿಕ್ಯುಲೇಟ್ಸ್ ರೀ ಇನ್‌ಫೋರ್ಸ್‌ಡ್ ಕಾಂಪೋಸಿಟ್ಸ್ ಕುರಿತ ಮಹಾಪ್ರಬಂಧಕ್ಕೆ ಈ ಪದವಿ ಲಭಿಸಿದೆ. ಡಾ.ಶಿವಪ್ರಕಾಶ್ ವೈ.ಎಂ. ಅವರ ಮಾರ್ಗದರ್ಶನ, ಡಾ.ಗುರುಮೂರ್ತಿ ಬಿ.ಎಂ. ರಿಸರ್ಚ್ ಕೋ ಗೈಡ್ ಆಗಿದ್ದರು.