ಬಡವರಿಗೆ ಹಂಚಬೇಕಿದ್ದ ಲಾರಿಗಟ್ಟಲೆ ಅನ್ನಭಾಗ್ಯ ಅಕ್ಕಿ ಇದೊಂದೇ ಮನೆಯಲ್ಲಿತ್ತು!

annabhagya rice
Published on

ರಾಯಚೂರು: ತಿನ್ನೋ ಅನ್ನವನ್ನೂ ಕಿಡಿಗೇಡಿಗಳು ಕಳವು ಮಾಡಿದ್ರೆ ಬಡಜನರು ಬದುಕುವುದಾದರೂ ಹೇಗೆ? ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂದು ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕೊಡುತ್ತಿದೆ. ಇದಕ್ಕೂ ಖನ್ನ ಹಾಕುತ್ತಿರುವ ದುಷ್ಕರ್ಮಿಗಳು ಬರೋಬ್ಬರಿ 150 ಮೂಟೆ ಅಕ್ಕಿಯನ್ನು ಅಕ್ರಮವಾಗಿ ಮನೆಯೊಂದರಲ್ಲಿ ಬಚ್ಚಿಟ್ಟಿರುವ ಪ್ರಕರಣ ಪತ್ತೆಯಾಗಿದೆ.

ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದ ಅಮರಯ್ಯಸ್ವಾಮಿ ಎಂಬುವವರ ಮನೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಚೀಲ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಇಡಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ಅಮರಯ್ಯಸ್ವಾಮಿ ಮನೆ ಮೇಲೆ ದಾಳಿ ಮಾಡಿದ ಪೊಲೀಸರು, ಅನ್ನಭಾಗ್ಯ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಅಮರಯ್ಯಸ್ವಾಮಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net