ಅಣ್ಣಾ ವಿ.ವಿಯಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಅಪರಾಧಿ ಜ್ಞಾನಶೇಖರನ್‌ಗೆ 30 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​ | Anna University

dk - 2025-06-02T114457.176
Published on

Anna University: ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚೆನ್ನೈ ಮಹಿಳಾ ನ್ಯಾಯಾಲಯವು ಸೋಮವಾರ ಅಪರಾಧಿ ಎ.ಜ್ಞಾನಶೇಖರನ್‌ಗೆ 30 ವರ್ಷ ಜೈಲು ಶಿಕ್ಷೆ ಹಾಗೂ 90 ಸಾವಿರ ರೂ.ದಂಡವನ್ನು ವಿಧಿಸಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಬಿರಿಯಾನಿ ಮಾರಾಟಗಾರ ಎ.​​ಜ್ಞಾನಶೇಖರನ್ ಅವರನ್ನು ತಪ್ಪಿತಸ್ಥ(ದೋಷಿ) ಎಂದು ಇದೇ ಮೇ.28 ರಂದು ತೀರ್ಪು ನೀಡಿತ್ತು. ಪ್ರಾಸಿಕ್ಯೂಷನ್ ದೋಷಿಗೆ ಗರಿಷ್ಠ ಶಿಕ್ಷೆ ನೀಡುವಂತೆ ಮನವಿ ಮಾಡಿತ್ತು. ಇದೀಗ ರಾಜಲಕ್ಷ್ಮೀ ಅವರಿದ್ದ ಪೀಠ ಶಿಕ್ಷೆ ನೀಡಿ ಆದೇಶಿಸಿದೆ.

ಜ್ಞಾನಶೇಖರನ್ ವಿರುದ್ಧ ಪ್ರಾಸಿಕ್ಯೂಷನ್ 11 ಆರೋಪಗಳನ್ನು ಮಾಡಿದ್ದು, ಸಾಕ್ಷ್ಯಚಿತ್ರ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳನ್ನು ಬಳಸಿಕೊಂಡು ಅವೆಲ್ಲವನ್ನೂ ಸಾಬೀತುಪಡಿಸಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.

ಜ್ಞಾನಶೇಖರನ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆತನ ವಿರುದ್ಧ ಡಿಸೆಂಬರ್​ 23ರಂದು(2024) ಸಂತ್ರಸ್ತೆಯು ಪ್ರಕರಣ ದಾಖಲಿಸಿದ್ದಳು. ಬಳಿಕ ಜ್ಞಾನಶೇಖರನ್ ಅನ್ನು ಪೊಲೀಸರು ಬಂಧಿಸಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net