ವಿರಾಟ್​​ ಕೊಹ್ಲಿ ಮಾಲೀಕತ್ವದ ಬೆಂಗಳೂರಿನ ಪಬ್​​ ವಿರುದ್ಧ ಕೇಸ್​​ ದಾಖಲಿಸಿದ ಪೊಲೀಸರು! | Virat Kohli

dk - 2025-06-02T110240.294
Published on

Virat Kohli: ಭಾರತದ ಕ್ರಿಕೆಟ್​​ ಆಟಗಾರ ವಿರಾಟ್​​ ಕೊಹ್ಲಿ ಒಡೆತನದ ಬೆಂಗಳೂರಿನಲ್ಲಿರುವ ಒನ್​​ 8 ಪಬ್​​(One 8 Commune Pub and Restaurant) ವಿರುದ್ಧ ಕಬ್ಬನ್​​ಪಾರ್ಕ್​ ಪೊಲೀಸರು ಕೇಸ್​ ದಾಖಲಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್​ಐ ಸೋಮವಾರ ವರದಿ ಮಾಡಿದೆ.

COTPA ಕಾಯ್ದೆ (ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ) ಉಲ್ಲಂಘನೆಗಾಗಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ರೆಸ್ಟೋರೆಂಟ್ ಒಳಗೆ ಧೂಮಪಾನಕ್ಕಾಗಿ ಗೊತ್ತುಪಡಿಸಿದ ವಲಯವನ್ನು ಹೊಂದಿರದ ಕಾರಣಕ್ಕಾಗಿ COTPA ಕಾಯ್ದೆಯ ಸೆಕ್ಷನ್ 4 ಮತ್ತು 21 ರ ಅಡಿಯಲ್ಲಿ ಪಬ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಸಬ್-ಇನ್ಸ್‌ಪೆಕ್ಟರ್ ಅಶ್ವಿನಿ ಜಿ ನೇತೃತ್ವದ ಪೊಲೀಸ್ ತಂಡ, ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿರುವ ಕಸ್ತೂರ್ಬಾ ರಸ್ತೆಯಲ್ಲಿರುವ ಪಬ್‌ನಲ್ಲಿ ಹಠಾತ್ ತಪಾಸಣೆ ನಡೆಸಿತು. ಪರಿಶೀಲನೆಯ ನಂತರ, ವ್ಯವಸ್ಥಾಪಕ ಮತ್ತು ಸಿಬ್ಬಂದಿಯ ವಿರುದ್ಧ ನಿಯಮ ಪಾಲಿಸದಿದ್ದಕ್ಕಾಗಿ ಪ್ರಕರಣ ದಾಖಲಿಸಲಾಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net