'ಅವನು ಈ ಆಟಕ್ಕೆ ಬಂದಿದ್ದಾನೇನು'…ಎಂದು ಸಲ್ಮಾನ್​ಗೆ ಕೇಳಿದ್ದೇಕೆ ನಟಿ ಅಂಕಿತಾ?

ankitha lokhande
Published on

ಮುಂಬೈ: ಬಾಲಿವುಡ್​ ನಟಿ ಅಂಕಿತಾ ಲೋಖಂಡೆ ಸದಾ ಸುದ್ದಿಯಲ್ಲಿರುವ ಹೆಸರು. ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಆಕೆ ತನ್ನ ವೃತ್ತಿಜೀವನವನ್ನು ಟಿವಿ ಧಾರಾವಾಹಿಗಳೊಂದಿಗೆ ಪ್ರಾರಂಭಿಸಿದರು. ಕೆಲವು ಚಿತ್ರಗಳಲ್ಲಿ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅಂಕಿತಾ ಲೋಖಂಡೆ ಬಿಗ್ ಬಾಸ್ 17 ರ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅಂಕಿತಾ ಲೋಖಂಡೆ ಸಲ್ಮಾನ್ ಖಾನ್‌ಗೆ ಕನ್ನಡಿ ತೋರಿಸುತ್ತಿರುವುದು ಕಂಡುಬಂದಿದೆ. ಸಲ್ಮಾನ್ ಖಾನ್ ಅಂಕಿತಾ ಲೋಖಂಡೆಗೆ ಒಳ್ಳೆಯ ಮಾತುಗಳನ್ನಾಡುತ್ತಿರುವುದು ಕಂಡುಬಂದಿದೆ.

"ವಿಕ್ಕಿ ಜೈನ್ ಜನಪ್ರಿಯತೆಯ ಬಗ್ಗೆ ನಾನು ಅಸೂಯೆಪಡುತ್ತೇನೆ. ಅವನು ನನಗೆ ಸಮಯ ಕೊಡಬೇಕು. ಅವನು ನನಗೆ ಸಮಯವನ್ನೇ ಕೊಡುವುದಿಲ್ಲ" ಎಂದು ಪತಿ ಬಗ್ಗೆ ಅಂಕಿತಾ ಲೋಖಂಡೆ ಹೇಳಿದ್ದಳು.

ಈ ಬಗ್ಗೆ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿ "ನಿಮ್ಮ ಪತಿ ಜನಪ್ರಿಯತೆ ಗಳಿಸುತ್ತಿದ್ದರೆ ನಿಮಗೇನು ಸಮಸ್ಯೆ" ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಕೆ ಜನಪ್ರಿಯತೆ ಗಳಿಸಲು ವಿಕ್ಕಿ ಈ ಆಟಕ್ಕೆ ಬಂದಿದ್ದಾನೇನು?" ಎಂದು ಮರುಪ್ರಶ್ನೆ ಹಾಕಿದ್ದಾಳೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನಟಿ ಅಂಕಿತಾ ಲೋಖಂಡೆ ಟ್ರೋಲ್ ಆಗುತ್ತಿರುವುದಂತೂ ಸತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net