ಉಪಾಧ್ಯಕ್ಷರಾಗಿ ಅಂಕಶೆಟ್ಟಿ ಆಯ್ಕೆ

ಉಪಾಧ್ಯಕ್ಷರಾಗಿ ಅಂಕಶೆಟ್ಟಿ ಆಯ್ಕೆ
Published on

ಎಚ್.ಡಿ.ಕೋಟೆ: ತಾಲೂಕಿನ ನಾಗನಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕೆ.ಎಂ.ಹಳ್ಳಿ ಗ್ರಾಮದ ಅಂಕಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ನಡೆದ ಮಾತುಕತೆಯಂತೆ ಉಪಾಧ್ಯಕ್ಷ ಸ್ಥಾನ ಮೊದಲ ಹತ್ತು ತಿಂಗಳ ಅವಧಿಗೆ ಮಾಚನಾಯಕನ ಹಳ್ಳಿ ದಯಾನಂದ, ಎರಡನೇ ಅವಧಿಗೆ ಅಂಕಶೆಟ್ಟಿ ಹಾಗೂ ಮೂರನೇ ಅವಧಿಗೆ ಮೊತ್ತ ಗ್ರಾಮದ ದುರ್ಗ ಅವರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿತ್ತು. ಇದರಂತೆ ಮೊದಲ ಹತ್ತು ತಿಂಗಳು ಅಧಿಕಾರ ನಡೆಸಿದ ದಯಾನಂದ ಒಂದು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು. ಉಪವಿಭಾಗಾಧಿಕಾರಿ ರಾಜಿನಾಮೆ ಅಂಗೀಕರಿಸಿ ಬುಧವಾರ ಚುನಾವಣಾ ದಿನಾಂಕ ಘೋಷಣೆ ಮಾಡಿದ್ದರು.

ಬುಧವಾರ ನಡೆದ ಚುನಾವಣೆಯಲ್ಲಿ ಅಂಕಶೆಟ್ಟಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದ್ರಮ್ಮ ಮಹಾದೇವು ಹಾಗೂ ಸದಸ್ಯರು ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಚುನಾವಣಾ ಅಧಿಕಾರಿಯಾಗಿ ರಾಮಸ್ವಾಮಿ ಕಾರ್ಯನಿರ್ವಹಿಸಿದರು.

ಸದಸ್ಯ ಅಪ್ಪಣ್ಣ, ಕೆಂಡಗಣ್ಣಸ್ವಾಮಿ, ನಾಗನಹಳ್ಳಿ ಶಾಂತಕುಮಾರ್, ಮುಖಂಡ ಸಣ್ಣ ಕುಮಾರ್, ನೆನಪು ರವಿ, ಕೆ.ಜಿ ಹಳ್ಳಿ ಆನಂದ್, ಚೆಲುವರಾಜ್, ಚಿನ್ನಯ್ಯ, ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net