ಮೇಲ್ವಿಚಾರಕಿಗೆ ಬೀಳ್ಕೊಡುಗೆ

nrp anganvadi sendoff
ಎನ್.ಆರ್.ಪುರ ಅಂಗನವಾಡಿಯಲ್ಲಿ ವರ್ಗಾವಣೆಗೊಂಡ ದಾಕ್ಷಾಯಿಣಿಬಾಯಿ ಅವರಿಗೆ ಬೀಳ್ಕೊಡಲಾಯಿತು. ರತ್ನಾ, ಮಧುಮಾಲತಿ, ಕವಿತಾ, ಉಷಾ, ಶ್ರುತಿ, ಗೀತಾ, ಇತರರಿದ್ದರು.
Published on

ಎನ್.ಆರ್.ಪುರ: ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಮೇಲ್ವಿಚಾರಕಿಯಾಗಿ 4 ವರ್ಷದ ನನ್ನ ಸೇವಾ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ ಎಂದು ವರ್ಗಾವಣೆಗೊಂಡಿರುವ ಶಿಶು ಅಭಿವೃದ್ಧಿ ಇಲಾಖೆಯ ಎನ್.ಆರ್.ಪುರ ವಲಯ ಮೇಲ್ವಿಚಾರಕಿ ದಾಕ್ಷಾಯಿಣಿಬಾಯಿ ತಿಳಿಸಿದರು.
ಪಟ್ಟಣದ 3ನೇ ಅಂಗನವಾಡಿಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಂತರ ಬಡ್ತಿ ಹೊಂದಿ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಅಂಗನವಾಡಿ ಕಾರ್ಯಕರ್ತೆಯರ ಕಷ್ಟ, ಸುಖಗಳ ಅರಿವಿದೆ ಎಂದರು.
ಸಿಂಸೆ ಅಂಗನವಾಡಿ ಕಾರ್ಯಕರ್ತೆ ರತ್ನಾ ಮಾತನಾಡಿ, ವರ್ಗಾವಣೆ ಎಂಬುದು ಸರ್ಕಾರಿ ನೌಕರರಿಗೆ ಸಹಜ ಪ್ರಕ್ರಿಯೆ. ದಾಕ್ಷಿಯಣಿಬಾಯಿ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ ಎಂದು ಹೇಳಿದರು. ಅಂಗನವಾಡಿ ಕಾರ್ಯಕರ್ತೆಯರಾದ ಶಿವರತ್ನಾ, ಮಧುಮಾಲತಿ, ಕವಿತಾ, ಉಷಾ, ಶ್ರುತಿ, ಗೀತಾ ಮುಂತಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಎನ್.ಆರ್.ಪುರ ವಲಯದ 33 ಅಂಗನವಾಡಿಯ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net