ಸನ್ಮಾನ ಮಾಡಿಸಿಕೊಳ್ಳಲು ಹೋದ ಶಾಸಕ ಬಟ್ಟೆ ತೊಳೆದು...ಇಸ್ತ್ರಿ ಮಾಡಿದರು !

Published on

ಚಿತ್ತೂರು: ಆಂಧ್ರಪ್ರದೇಶದ ಶ್ರೀಕಾಲಹಸ್ತಿ ಶಾಸಕ ಬಿ.ಮಧುಸುಧೂನ್​ ರೆಡ್ಡಿ ಅವರು ಸದ್ಯ ಸಾರ್ವಜನಿಕವಾಗಿ ಬಟ್ಟೆಗಳನ್ನು ತೊಳೆದು, ಇಸ್ತ್ರಿ ಮಾಡಿ ಸುದ್ದಿಯಾಗಿದ್ದಾರೆ.

ಚಿತ್ತೂರಿನ ಅಗಸರ ಒಕ್ಕೂಟದಿಂದ ಶಾಸಕ ಮಧುಸೂಧನ್​ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಸನ್ಮಾನಿತರಾದ ಶಾಸಕರು ನಂತರ ಒಂದಷ್ಟು ಬಟ್ಟೆಗಳನ್ನು ಕೈಯಿಂದಲೇ ತೊಳೆದು, ಅವಕ್ಕೆಲ್ಲ ಇಸ್ತ್ರಿ ಮಾಡಿದ್ದಾರೆ. ಇದನ್ನೂ ಓದಿ: VIDEO| ಕರೊನಾಗೆ ಹೆದರಬೇಡಿ: ಪೊಲೀಸರಿಗೆ ಯೋಗ ಟೀಚರ್ ಆಗಿ ಧೈರ್ಯ ತುಂಬಿದ ಅಲೋಕ್​ ಕುಮಾರ್​!

ಜೂನ್ 10ರಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಮುಖ್ಯಮಂತ್ರಿ ವೈ.ಎಸ್​.ಜಗನ್​ ಮೋಹನ್​ ರೆಡ್ಡಿ ಅವರು 'ಜಗನ್ನಣ್ಣ ಚೆಡೋಡು' ಎಂಬ ಯೋಜನೆಯೊಂದನ್ನು ಉದ್ಘಾಟನೆ ಮಾಡಿದ್ದಾರೆ. ಈ ಯೋಜನೆಯಡಿ ಲಾಕ್​ಡೌನ್​ ಅವಧಿಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೀಡಾದ ಟೇಲರ್​ಗಳು, ಕ್ಷೌರಿಕರು, ಅಗಸರಿಗೆ ತಲಾ 10,000 ರೂ.ನೆರವು ಕೊಡುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಮಧುಸೂಧನ್​ ಅವರೂ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಕ್ಷೇತ್ರದ ಅಗಸರ ಒಕ್ಕೂಟ ಸನ್ಮಾನ ಮಾಡಿದೆ.

ಜಗನ್ನಣ್ಣ ಚೆಡೋಡು ಯೋಜನೆಗೆ ಒಟ್ಟು 247 ಕೋಟಿ ರೂ.ಮೀಸಲಿಡಲಾಗಿದ್ದು, ಫಲಾನುಭವಿಗಳ ಖಾತೆಗೆ ನೇರವಾಗಿ 10,000ರೂ.ಬರುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net