ನೀವಿಲ್ಲದೆ ಅಭಿಮಾನ ಇಲ್ಲ, ಬದುಕಿಗೆ ಕಳೆ ಇಲ್ಲ; ಅಪ್ಪು ನೆನೆದು Anchor Anushree ಭಾವುಕ ಪೋಸ್ಟ್​

Anushree Puneeth
Published on

ಬೆಂಗಳೂರು: ಪವರ್​ಸ್ಟಾರ್​, ಕರ್ನಾಟಕ ರತ್ನ, ಡಾ. ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ನಮ್ಮನ್ನು ಅಗಲಿ ಇಂದಿಗೆ ಮೂರು ವರ್ಷಗಳಾಗಿದ್ದು, ಇಂದಿಗೂ ಜನಮಾನಸದಲ್ಲಿ ಅಜರಾಮರರಾಗಿದ್ದಾರೆ. ಅಪ್ಪು ಮೂರನೇ ಪುಣ್ಯಸ್ಮರಣೆಯಂದು ಅಭಿಮಾನಿಗಳು ಹಾಗೂ ಗಣ್ಯರು ಅವರ ಸಮಾಧಿ ಬಳಿ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದು, ನಿರೂಪಕಿ ಅನುಶ್ರೀ (Anchor Anushree) ಭಾವುಕ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ನಮ್ಮ ಕಂಗಳ ಬಿಸಿಯ ಹನಿಗಳು ನೂರು ಬಾರಿ ಕೂಗಿದೆ ... ನಿಮ್ಮ ನಗುವ ಮೊಗವ ನೋಡಲು ಕೋಟಿ ಕಂಗಳು ಕಾಯುತ್ತಿದೆ. Miss u sir.. ನೀವಿಲ್ಲದೆ ಅಭಿಮಾನ ಇಲ್ಲ.... ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ...ನೀವಿಲ್ಲದ ಬದುಕಿಗೆ ಕಳೆ ಇಲ್ಲ ... ಎಂದು ಭಾವನಾತ್ಮಕ ಪೋಸ್ಟ್​ಅನ್ನು ಹಂಚಿಕೊಂಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರ ಮೂರನೇ ಪುಣ್ಯಸ್ಮರಣೆಯ ಪ್ರಯುಕ್ತ ಅವರ ಸಮಾಧಿಯನ್ನು ಹೂಗಳಿಂದ ಅಲಂಕರಿಸಲಾಗಿದ್ದು, ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ದೊಡ್ಮನೆ ಕುಟುಂಬ ಸದಸ್ಯರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದು, ದೂರದ ಊರುಗಳಿಂದ ಬಂದಿರುವ ಜನರು ನೆಚ್ಚಿನ ನಟನಿಗೆ ನಮನವನ್ನು ಸಲ್ಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net