Birthday Special: 25ಕ್ಕೆ ಕಾಲಿಟ್ಟ ಬಾಲಿವುಡ್​ ಬೆಡಗಿ ಅನನ್ಯಾ…

ananya
Published on

ಮುಂಬೈ: ಅನನ್ಯಾ ಪಾಂಡೆ ಪ್ರತಿಭಾವಂತ ಬಾಲಿವುಡ್ ನಟಿ. ಅ.30 ಆಕೆಯ ಜನ್ಮದಿನ. ಸೋಮವಾರ ಆಕೆ ತನ್ನ 25 ನೇ ಹುಟ್ಟುಹಬ್ಬವನ್ನು ಆಚರಿಕೊಂಡರು.

ಅನನ್ಯಾ 2019 ರಲ್ಲಿ "ಸ್ಟೂಡೆಂಟ್ ಆಫ್ ದಿ ಇಯರ್ 2" ಚಲನಚಿತ್ರದಲ್ಲಿ ನಟಿಸುವ ಮೂಲಕ ಸಿನಿಮಾ ಜರ್ನಿ ಪ್ರಾರಂಭಿಸಿದರು. ಆಕೆ ಗ್ಲಾಮರ್​ ಪಾತ್ರಗಳಲ್ಲಿ ಮಿಂಚುವ ಮೂಲಕ ಶೀಘ್ರ ಜನಮನ್ನಣೆ ಪಡೆದರು.

ಅನನ್ಯಾ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಭಾರತೀಯ ಚಲನಚಿತ್ರೋದ್ಯಮದ ಭರವಸೆಯ ಯುವ ತಾರೆಗಳಲ್ಲಿ ಒಬ್ಬರಾಗಿದ್ದಾರೆ.

ತನ್ನ ನಟನಾ ಕೌಶಲ್ಯದ ಹೊರತಾಗಿಯೂ ಅನನ್ಯಾ ಫ್ಯಾಶನ್ ಸೆನ್ಸ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವ ಅನನ್ಯ ಸದಾ ಪಾದರಸದಂತೆ ಚುರುಕಾಗಿರುವ ನಟಿ. ಈಕೆ ತನ್ನ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಸಂಪರ್ಕ ಹೊಂದಿರುತ್ತಾಳೆ. ಈಕೆ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಕಿರುನೋಟಗಳನ್ನು ಹಂಚಿಕೊಳ್ಳುತ್ತಾಳೆ.

ಅನನ್ಯಾ ಪಾಂಡೆ ನಿಸ್ಸಂದೇಹವಾಗಿ ಮನರಂಜನಾ ಜಗತ್ತಿನಲ್ಲಿ ಉದಯೋನ್ಮುಖ ತಾರೆ, ಸಿನಿ ಉದ್ಯಮದಲ್ಲಿ ಆಕೆ ಭವಿಷ್ಯ ಉಜ್ವಲವಾಗಿ ಕಾಣುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net