

ಅದು ಅಕ್ಷರಶಃ ವೈಭವದ ಲೋಕ. ಮದುವೆಪೂರ್ವ ಸಮಾರಂಭಕ್ಕೆ ಜಾಗತಿಕ ಗಣ್ಯರು ನೆರೆದ ವಿಶಿಷ್ಟ ಸನ್ನಿವೇಶ. ಹೌದು, ಉದ್ಯಮ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಮುಕೇಶ್ ಅಂಬಾನಿ ಅವರು ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆಪೂರ್ವ ಸಮಾರಂಭದ ನಿಮಿತ್ತ ಗುಜರಾತಿನ ಜಾಮ್ಗರದಲ್ಲಿ ಗ್ಲೋಬಲ್ ಸೆಲಬ್ರಿಟಿಗಳನ್ನು ಒಟ್ಟಿಗೆ ಸೇರಿಸಿದ್ದಾರೆ. ಮಾರ್ಚ್ 1ರಿಂದ 3ರವರೆಗೆ ವಿವಿಧ ಥೀಮ್ಳಲ್ಲಿ ಸಮಾರಂಭ ನಡೆಯಲಿದ್ದು, ಅದ್ದೂರಿಯ ಉತ್ತುಂಗ ಇದಾಗಿದೆ. ಮಾರ್ಚ್ 1 ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 1ರ ನಡುವೆ ಮುಂಬೈ ಹಾಗೂ ದೆಹಲಿಯಿಂದ ಚಾರ್ಟರ್ಡ್ ವಿಮಾನಗಳಲ್ಲಿ ಅನೇಕ ಅತಿಥಿಗಳು ಜಾಮ್ಗರ ತಲುಪಿದರು.
ಸಂಜೆ ಆರಂಭವಾದ ಸಮಾರಂಭ ಮಧ್ಯರಾತ್ರಿವರೆಗೂ ನಡೆಯಿತು. ಇದಕ್ಕೂ ಮುನ್ನ, ಗುರುವಾರದಂದು ಜಾಮ್ಗರ ಸುತ್ತಮುತ್ತಲ ಗ್ರಾಮಗಳ 50 ಸಾವಿರ ಜನರಿಗೆ ಔತಣಕೂಟ ನೀಡಲಾಯಿತು. ಮುಕೇಶ್ ಅಂಬಾನಿ, ನೀತಾ, ಅನಂತ್ ಹಾಗೂ ರಾಧಿಕಾ ಖುದ್ದಾಗಿ ಗ್ರಾಮಸ್ಥರಿಗೆ ಉಣಬಡಿಸಿದರು.
ಜಾಮ್ಗರ ಏಕೆ?: ವಿವಾಹಪೂರ್ವ ಸಮಾರಂಭಕ್ಕೆ ಜಾಮ್ಗರ ಆಯ್ಕೆ ಮಾಡಿಕೊಂಡಿರುವುದಕ್ಕೆ ಕಾರಣ ವನ್ನು ಮುಕೇಶ್ ಪತ್ನಿ ನೀತಾ ಅಂಬಾನಿ ವಿವರಿಸಿದ್ದಾರೆ. ‘ನನ್ನ ಮಕ್ಕಳು ಬಾಲ್ಯವನ್ನು ಜಾಮ್ಗರದಲ್ಲಿ ಕಳೆದಿದ್ದಾರೆ, ಇಲ್ಲಿ ಬಾಲ್ಯದ ವಿಶಿಷ್ಟ ಅನುಭವವನ್ನು, ಪರಿಸರದೊಂದಿಗಿನ ಸಾಂಗತ್ಯವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಬೇರುಗಳು ಮರೆಯಬಾರದು ಎಂಬ ಉದ್ದೇಶದಿಂದ ಮತ್ತು ಹಳೆಯ ಕ್ಷಣಗಳನ್ನು ನೆನಪಿಸಿ, ಆಹ್ಲಾದಿಸುವ ದೃಷ್ಟಿಯಿಂದ ವಿವಾಹ ಪೂರ್ವ ಸಮಾರಂಭಕ್ಕೆ ಜಾಮ್ಗರ ಆಯ್ಕೆ ಮಾಡಲಾ ಯಿತು’ ಎಂದಿದ್ದಾರೆ. ತಂದೆ ಧೀರೂಬಾಯಿ ಅಂಬಾನಿ ಅವ ರಿಂದ ಉದ್ಯಮದ ಜವಾಬ್ದಾರಿಯನ್ನು ಸ್ವೀಕರಿಸಿ, ಮುಕೇಶ್ ಕಾರ್ಯಾರಂಭ ಮಾಡಿದ್ದು ಕೂಡ ಜಾಮ್ಗರದಿಂದಲೇ.
ವಿಭಿನ್ನ ಕಾರ್ಯಕ್ರಮಗಳು : ಆಚರಣೆಯ ಎಲ್ಲ ಮೂರು ರಾತ್ರಿಗಳು ವಿಷಯಾಧಾರಿತವಾಗಿರುತ್ತವೆ. ಮಾರ್ಚ್ 1ರ ಕಾರ್ಯಕ್ರಮ ‘ಎವರ್ಲ್ಯಾಂಡ್ನಲ್ಲಿ ಸಂಜೆ’ ಎಂಬ ಥೀಮ್ಲ್ಲಿ ನಡೆಯಿತು. ಇದಕ್ಕೆ ವಿಶಿಷ್ಟ ಡ್ರೆಸ್ಕೋಡ್ ರೂಪಿಸಲಾಗಿತ್ತು. ಶನಿವಾರ ಜಂಗಲ್ ಫೀವರ್ನೊಂದಿಗೆ ವೈಲ್ಡ್ಸೈಡ್ನಲ್ಲಿ ನಡಿಗೆ (ಪ್ರಾಣಿ ರಕ್ಷಣಾ ಕೇಂದ್ರದ ಹೊರಾಂಗಣದಲ್ಲಿ) ಆಯೋಜಿಸಲಾಗಿದೆ ಮತ್ತು ಈ ಕಾರ್ಯಕ್ರಮಕ್ಕಾಗಿ ಅತಿಥಿಗಳು ಆರಾಮದಾಯಕ ಬೂಟುಗಳು ಮತ್ತು ಬಟ್ಟೆಗಳನ್ನು ಧರಿಸಲು ಸಲಹೆ ನೀಡಲಾಗಿದೆ. ಸಫಾರಿ-ಥೀಮಿನ ಬಟ್ಟೆಗಳನ್ನು ಅತಿಥಿಗಳು ಧರಿಸಲಿದ್ದಾರೆ. ಈ ಮೂಲಕ ದಕ್ಷಿಣ ಏಷ್ಯಾದ ಸಾಂಪ್ರದಾಯಿಕ ಉಡುಪು ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶ ಹೊಂದಲಾಗಿದೆ.
ಅಂತಿಮ ದಿನ (ಭಾನುವಾರ) ಎರಡು ಕಾರ್ಯಕ್ರಮ ನಡೆಯಲಿವೆ. ಟಸ್ಕರ್ ಟ್ರೇಲ್ಸ್, ಅಂದರೆ ಅತಿಥಿಗಳು ಜಾಮ್ಗರದ ಹಸಿರು ವಾತಾವರಣವನ್ನು ಇನ್ನಷ್ಟು ಅನ್ವೇಷಿಸಲಿದ್ದಾರೆ. ಸಂಜೆ ಭಾರತೀಯ ಸಾಂಪ್ರದಾಯಿಕ ಉಡುಪುಗಳನ್ನು ಅತಿಥಿಗಳು ಧರಿಸಿ, ಸಂಜೆಯ ಸೊಬಗನ್ನು ಸವಿಯಲಿದ್ದಾರೆ. ವಸ್ತ್ರವಿನ್ಯಾಸ, ಕೇಶವಿನ್ಯಾಸ, ಮೇಕಪ್ಗಾಗಿ ಪರಿಣಿತರ ತಂಡ ನಿಯೋಜಿಸಲಾಗಿದೆ. ಅವರವರ ಆಸಕ್ತಿಯ ಅನುಸಾರವಾಗಿ ಅತಿಥಿಗಳಿಗೆ ಮೇಕಪ್ ಮಾಡಲಾಗುತ್ತದೆ. ಐಷಾರಾಮಿ ಟೆಂಟ್ಗಳಲ್ಲಿ ಅತಿಥಿಗಳು ವಾಸ್ತವ್ಯ ಹೂಡಲಿದ್ದಾರೆ.
9 ಪುಟಗಳ ಆಮಂತ್ರಣ: ಅತಿಥಿಗಳಿಗೆ ಕಳುಹಿಸಲಾದ ಒಂಬತ್ತು ಪುಟಗಳ ಈವೆಂಟ್ ಗೈಡ್ ಮತ್ತು ವಾಡ್ರೋಬ್ ಪ್ಲಾನರ್ ಮೂರು ದಿನಗಳ ವಿವಾಹಪೂರ್ವ ಸಮಾರಂಭದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದರ ಅವಲೋಕನ ನೀಡುತ್ತದೆ. ಪ್ರಯಾಣದ ವ್ಯವಸ್ಥೆ, ತಂಗುವ ವ್ಯವಸ್ಥೆ, ಕಾರ್ಯಕ್ರಮಗಳ ವಿವರ, ಧರಿಸಬೇಕಾದ ಉಡುಪುಗಳ ಬಗ್ಗೆ ಮಾಹಿತಿಯನ್ನು ಇದು ಒಳಗೊಂಡಿದೆ.
ಆತಿಥ್ಯ ತಂಡ: ಪ್ರವೇಶಿಸುವಿಕೆ, ವೈದ್ಯಕೀಯ ನೆರವು ಅಥವಾ ಆಹಾರದ ಅವಶ್ಯಕತೆಗಳನ್ನು ಪೂರೈಸಲು ವೃತ್ತಿಪರ ಆತಿಥ್ಯ ತಂಡವನ್ನು ನಿಯೋಜಿಸಲಾಗಿದೆ. ವಿವರವಾದ ವಾಡ್ರೋಬ್ (ಡ್ರೇಸ್ಕೋಡ್) ಸಲಹೆಗಳ ಹೊರತಾಗಿಯೂ, ಅತಿಥಿಗಳು ಅವರ ಇಷ್ಟದ ಉಡುಪುಗಳನ್ನು ಧರಿಸಬಹುದಾಗಿದೆ. ‘ನೀವು ಪ್ರತಿ ಕ್ಷಣವನ್ನೂ ಪೂರ್ಣವಾಗಿ ಆನಂದಿಸಲು ಮತ್ತು ಜೀವಿತಾವಧಿಯಲ್ಲಿ ಸುಂದರವಾದ ನೆನಪುಗಳನ್ನು ಹೊಂದಲು ನಾವು ಬಯಸುತ್ತೇವೆ’ ಎಂದು ಮಾರ್ಗದರ್ಶಿ ಪತ್ರದಲ್ಲಿ ತಿಳಿಸಲಾಗಿದೆ.
ಬಾಲಿವುಡ್ ತಾರೆಯರು: ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಆಮೀರ್ ಖಾನ್, ರಣಬೀರ್ ಕಪೂರ್-ಆಲಿಯಾ ಭಟ್, ಶಾರುಖ್ ಖಾನ್-ಗೌರಿ ಖಾನ್, ಸಲ್ಮಾನ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ.
ಕ್ರೀಡಾಲೋಕದಿಂದ: ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ. ರೋಹಿತ್ ಶರ್ವ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್
ಮುಂಬೈನಲ್ಲಿ ಮದುವೆ : ಇದೇ ವರ್ಷದ ಜುಲೈ 12ರಂದು ಮುಂಬೈಯಲ್ಲಿ ಮದುವೆ ನಡೆಯಲಿದ್ದು, ನಿಶ್ಚಿತಾರ್ಥ 2022ರಲ್ಲಿ ರಾಜಸ್ಥಾನದ ಶ್ರೀನಾಥಜೀ ಮಂದಿರದಲ್ಲಿ ನಡೆದಿತ್ತು.
ಸುಗ್ರಾಸ ಭೋಜನ
. ಅತಿಥಿಗಳಿಗೆ 75 ಖಾದ್ಯಗಳೊಂದಿಗೆ ಉಪಾಹಾರ
. 225ಕ್ಕೂ ಹೆಚ್ಚು ಪದಾರ್ಥಗಳೊಂದಿಗೆ ಮಧ್ಯಾಹ್ನದ ಊಟ
. ಸುಮಾರು 275 ಭಕ್ಷ್ಯಗಳೊಂದಿಗೆ ರಾತ್ರಿಯ ಊಟ
. ಆಯ್ಕೆ ಮಾಡಲು 85ಕ್ಕೂ ಹೆಚ್ಚು ಐಟಂಗಳೊಂದಿಗೆ ಮಧ್ಯರಾತ್ರಿಯ ಊಟ. ಇದು ಮುಂಜಾನೆ 4 ಗಂಟೆಯವರೆಗೆ ನಡೆಯುತ್ತದೆ.
. ಬಡಿಸಿದ ಪ್ರತಿಯೊಂದು ಪದಾರ್ಥವನ್ನು ಕಟ್ಟುನಿಟ್ಟಾದ ಮಾರ್ಗಸೂಚಿಗಳು ಮತ್ತು ಪೋ›ಟೋಕಾಲ್ ಅಡಿಯಲ್ಲಿ ತಯಾರಿಸಲಾಗುತ್ತದೆ ಮತ್ತು ಮೂರು ದಿನಗಳಲ್ಲಿ 12 ವಿಭಿನ್ನ ಊಟಗಳಿಗೆ ಬಡಿಸಿದ ಯಾವುದೇ ಭಕ್ಷ ್ಯಳನ್ನು ಪುನರಾವರ್ತಿಸಲಾಗುವುದಿಲ್ಲ.
. 20 ಮಹಿಳಾ ಬಾಣಸಿಗರು ಸೇರಿದಂತೆ 65 ಬಾಣಸಿಗರ ತಂಡ ಮತ್ತು ನಾಲ್ಕು ಟ್ರಕ್ಗಳಲ್ಲಿ ಪದಾರ್ಥಗಳು ಇಂದೋರ್ನಿಂದ ಜಾಮ್ಗರಕ್ಕೆ ಗುರುವಾರವೇ ತಲುಪಿವೆ.
. ವಿಶೇಷವಾಗಿ ‘ಇಂದೋರ್ ಸರಾಫಾ ಫುಡ್ ಕೌಂಟರ್’ ಅನ್ನು ಸಹ ಸ್ಥಾಪಿಸಲಾಗಿದೆ. ಇದು ಇಂದೋರಿ ಕಚೋರಿ, ಪೋಹಾ ಜಿಲೇಬಿ, ಭುಟ್ಟೆ ಕಿ ಖಿಸ್, ಖೋಪ್ರಾ ಪ್ಯಾಟೀಸ್, ಉಪ್ಪಿಟ್ಟು ಮತ್ತು ಇತರಭಕ್ಷ್ಯಗಳನ್ನು ಹೊಂದಿದೆ.