More

    ಜಾರ್ಖಂಡ್‌ನಲ್ಲಿ ಪ್ರಧಾನಿ ಮೋದಿ, 35 ಸಾವಿರ ಕೋಟಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ!

    ಜಾರ್ಖಂಡ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಜಾರ್ಖಂಡ್‌ನಲ್ಲಿ ಸುಮಾರು 35,700 ಕೋಟಿ ಮೊತ್ತದ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

    ಇದನ್ನೂ ಓದಿ:ಕುತೂಹಲ ಮೂಡಿಸಿದ ಭೇಟಿ: ಪ್ರಧಾನಿ ಮೋದಿ ಜತೆ ಮಮತಾ ಬ್ಯಾನರ್ಜಿ ಮಾತುಕತೆ!

    ಭಾರತದ ಸ್ವಾವಲಂಬನೆಯತ್ತ ಇಡುವ ದೊಡ್ಡ ಹೆಜ್ಜೆ ಇದಾಗಿದ್ದು, ವಿವಿಧ ಯೋಜನೆಗಳಲ್ಲಿ ಒಂದಾದ ಧನ್‌ಬಾದ್ ಜಿಲ್ಲೆಯ ಸಿಂದ್ರಿಯಲ್ಲಿ ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್‌ನ ಬರೋಬ್ಬರಿ 8,900 ಕೋಟಿ ರಸಗೊಬ್ಬರ ಘಟಕವನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.

    ಸಿಂದ್ರಿ ರಸಗೊಬ್ಬರ ಕಾರ್ಖಾನೆಯ ಪುನರಾರಂಭವು ಜಾರ್ಖಂಡ್ ಮತ್ತು ದೇಶದ ಯುವಕರಿಗೆ ಸಾವಿರಾರು ಹೊಸ ಉದ್ಯೋಗಾವಕಾಶಗಳಿಗೆ ನಾಂದಿಯಾಗಿದೆ ಸಿಂದ್ರಿಗಿಂತ ಮೊದಲು ರಾಮಗುಂಡಂ, ಗೋರಖ್‌ಪುರ ಮತ್ತು ಬರೌನಿಯಲ್ಲಿ ರಸಗೊಬ್ಬರ ಕಾರ್ಖಾನೆಗಳನ್ನು ತೆರೆದಿದ್ದೇವೆ. ಈ ಸ್ಥಾವರವು ದೇಶೀಯ ಯೂರಿಯಾ ಉತ್ಪಾದನೆಗೆ ವಾರ್ಷಿಕ ಸುಮಾರು 12.7 LMT (ಲಕ್ಷ ಮೆಟ್ರಿಕ್ ಟನ್) ಸೇರಿಸುತ್ತದೆ. ಇದು ದೇಶದ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.

    ಜಾರ್ಖಂಡ್‌ನಲ್ಲಿ ಪ್ರಧಾನಿ ಮೋದಿ, 35 ಸಾವಿರ ಕೋಟಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ!

    ಡಿಸೆಂಬರ್ 2021 ಮತ್ತು ನವೆಂಬರ್ 2022 ರಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ಉದ್ಘಾಟಿಸಲಾಗಿದ್ದ ಗೋರಖ್‌ಪುರ ಮತ್ತು ರಾಮಗುಂಡಂನಲ್ಲಿ ಅಂತಹ ಸೌಲಭ್ಯಗಳ ನಂತರ ದೇಶದಲ್ಲಿ ಪುನರುಜ್ಜೀವನಗೊಂಡ ಮೂರನೇ ರಸಗೊಬ್ಬರ ಸ್ಥಾವರ ಇದಾಗಿದೆ. ಭಾರತದ ಯೂರಿಯಾ ಉತ್ಪಾದನೆಯು 2014 ರಲ್ಲಿ 225 ಲಕ್ಷ ಟನ್‌ಗಳಿಂದ 310 ಲಕ್ಷ ಟನ್‌ಗೆ ತಲುಪಿದೆ. ಇದು ರಸಗೊಬ್ಬರದಲ್ಲಿ ಸ್ವಯಂ ಅವಲಂಬನೆಯತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಮೋದಿ ಹೇಳಿದರು.

    ಇದಾದ ಬಳಿಕ ಪ್ರಧಾನಿ ಅವರು ಚಾತ್ರಾ ಜಿಲ್ಲೆಯ ಉತ್ತರ ಕರ್ಣಾಪುರದಲ್ಲಿ NTPC ಯ 660 MW ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ರಾಮಗಢ ಜಿಲ್ಲೆಯಲ್ಲಿ ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್​​ನ ಕಲ್ಲಿದ್ದಲು ನಿರ್ವಹಣಾ ಘಟಕವನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ಜಾರ್ಖಂಡ್ ಗವರ್ನರ್ ಸಿ.ಪಿ. ರಾಧಾಕೃಷ್ಣನ್ ಮತ್ತು ಮುಖ್ಯಮಂತ್ರಿ ಚಂಪೈ ಸೊರೆನ್ ಅವರೊಂದಿಗೆ ಅನೇಕ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮಾಡಿದರು.

    ದಿಯೋಘರ್‌ನಿಂದ ಗೊಡ್ಡಾ ಮತ್ತು ತೋರಿ ಶಿವಪುರ ಮೂರನೇ ರೈಲು ಮಾರ್ಗವನ್ನು ಸಂಪರ್ಕಿಸುವ ಹೊಸ ರೈಲು ಮಾರ್ಗವನ್ನು ಉದ್ಘಾಟಿಸಿದರು ಮತ್ತು ದಿಯೋಘರ್-ದಿಬ್ರುಗಢ್ ನಡುವೆ ಟಾಟಾ ಬಾದಂಪಹಾರ್ ಡೈಲಿ ಮೆಮು ರೈಲಿನ ಹೊಸ ರೈಲಿಗೆ ಸಹ ಚಾಲನೆ ನೀಡಿದರು. ಇದಲ್ಲದೇ ಏಳು ರೈಲ್ವೆ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

    ಈ ಸಂದರ್ಭದಲ್ಲಿ ನೆರೆದಿದ್ದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಂದ್ರಿಯಲ್ಲಿ ಮುಚ್ಚಿರುವ ರಸಗೊಬ್ಬರ ಕಾರ್ಖಾನೆ ಪುನಶ್ಚೇತನಕ್ಕೆ ಪ್ರತಿಜ್ಞೆ ಮಾಡಿದ್ದೇನೆ. ಇದರ ಅಡಿಗಲ್ಲು 2018 ರಲ್ಲಿ ಹಾಕಲಾಯಿತು ಮತ್ತು ಇಂದು ಉದ್ಘಾಟನೆಯಾಯಿತು. ಇದು ಮೋದಿಯವರ ಗ್ಯಾರಂಟಿಯಾಗಿದ್ದು ಇಂದು ಈ ಭರವಸೆ ಈಡೇರಿದೆ ಎಂದರು.

    ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಎನ್ಐಎಗೆ ಒಪ್ಪಿಸಲು ವಿಜಯೇಂದ್ರ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts