

ಭಯಾನಕ ಅನಕೊಂಡ ಹಾವು...ದೊಡ್ಡ ಮೊಸಳೆಯನ್ನೊಂದು ನುಂಗಲು ಪ್ರಯತ್ನಿಸಿರುವ ವಿಡಿಯೋವೊಂದು ವೈರಲ್ ಆಗಿದೆ.
ಮನೌಸ್ನ ಪೊಂಟಾ ನೇಗ್ರಾ ಸಮೀಪ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಮೊಸಳೆಯನ್ನು ಸುತ್ತುವರಿದಿರುವ ಭಯಾನಕ ಅನಕೊಂಡಾ ಅದನ್ನು ನುಂಗಲು ಯತ್ನಿಸುತ್ತದೆ. ಈ ಮಧ್ಯೆ ಅಲ್ಲಿದ್ದವರು ಯಾರೋ ಹಾವಿಗೆ ಹಗ್ಗವನ್ನೂ ಕಟ್ಟಿದ್ದಾರೆ. ಮೊಸಳೆಯನ್ನು ಬಿಡಿಸಲು ಅದನ್ನು ಎಳೆಯುತ್ತಿದ್ದಾರೆ.
ಇದು ಆಗಸ್ಟ್ 6 ರಂದು ನಡೆದ ಘಟನೆ ಎಂದು ಅಲ್ಲಿನ ವೆಬ್ಸೈಟ್ವೊಂದು ವರದಿ ಮಾಡಿದೆ. ಘಟನೆ ನಡೆದ ಸ್ಥಳದ ನಿವಾಸಿಯಾಗಿರುವ ಡೆರ್ನಾಲ್ಡೋ ರೀಸ್ ಎಂಬುವರು ಇದರ ಬಗ್ಗೆ ಸ್ಥಳೀಯ ಮಾಧ್ಯಮವೊಂದರ ಬಳಿ ಮಾತನಾಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ 20 ಸಾವಿರಕ್ಕೂ ಅಧಿಕ ಜನರ ಜೀವ ಉಳಿಸಿದ ಕರೊನಾ!
ಆಗಸ್ಟ್ 7ರಂದು ನಾನು ಮನೆಗೆ ಬರುವಷ್ಟರಲ್ಲಿ ಈ ಭಯಾನಕ ಹಾವು ಮೊಸಳೆಯನ್ನು ಹಿಡಿದು, ಅದನ್ನು ನುಂಗಲು ಯತ್ನಿಸುತ್ತಿತ್ತು. ಅದರ ಸುತ್ತಲೂ ಒಂದಷ್ಟು ಜನರು ಸೇರಿದ್ದರು. ಹಾವಿನಿಂದ ಮೊಸಳೆಯನ್ನು ಬಿಡಿಸುವ ಪ್ರಯತ್ನ ಮಾಡುತ್ತಿದ್ದರು.
ಇದು ಸುಮಾರು 6 ಅಡಿ ಉದ್ದದ ಹಾವು ಆಗಿತ್ತು. ಕೊನೆಗೂ ಅಲ್ಲಿ ನೆರೆದಿದ್ದವರು ಎರಡನ್ನೂ ಬೇರ್ಪಡಿಸಿ, ಅರಣ್ಯಕ್ಕೆ ಅಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದೆ. ಅನೇಕರು..ಅಬ್ಬಾ ಎಂದು ಉದ್ಘಾರ ತೆಗೆದಿದ್ದಾರೆ. ಇನ್ನೂ ಕೆಲವರು, ಒಂದು ಪ್ರಾಣಿ ಇನ್ನೊಂದನ್ನು ಹಿಡಿದು ತಿನ್ನುವುದು ಪ್ರಾಕೃತಿಕ ನಿಯಮ. ಅದ್ಯಾಕೆ ಜನರು ಹಸ್ತಕ್ಷೇಪ ಮಾಡಬೇಕು? ಯಾಕಾಗಿ ಬೇರ್ಪಡಿಸಬೇಕು ಎಂದು ಪ್ರಶ್ನಿಸಿದ್ದಾರೆ.