More

    ಎಂಬಿಎ ಪಾಸಾದವರಿಗೆ ಆರ್​​​ಡಿಪಿಆರ್ ಇ- ಆಡಳಿತ ಕಚೇರಿಯಲ್ಲಿ ಅಕೌಂಟ್ ಎಕ್ಸ್​​ಪರ್ಟ್ ಆಗುವ ಅವಕಾಶ

    ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆಯ ಇ- ಆಡಳಿತ ಕಚೇರಿಯಲ್ಲಿ ಖಾಲಿ ಇರುವ ಅಕೌಂಟ್ ಎಕ್ಸ್​​ಪರ್ಟ್ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
    ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂಬಿಎ (ಫೈನಾನ್ಸ್)/ ಎಂ.ಕಾಮ್ (ರೆಗ್ಯೂಲರ್) ಪಾಸಾಗಿರಬೇಕು. ಕನಿಷ್ಠ 3 ವರ್ಷ ಅನುಭವ ಹಾಗೂ ಸರ್ಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದವರಿಗೆ ಆದ್ಯತೆ ಇರುತ್ತದೆ.

    ಇದನ್ನೂ ಓದಿ: ಎನ್​ಟಿಎ ವಿವಿಧ ಪರೀಕ್ಷೆಗಳ ದಿನಾಂಕ ಪ್ರಕಟಣೆ

    ಮಾಸಿಕ ರೂ. 35,000/- ರೂ. ದಿಂದ 45,000/- ರೂ. ವರೆಗೆ ಸಂಭಾವನೆ ನೀಡಲಾಗುತ್ತದೆ. ಸಂಪೂರ್ಣ ತಾತ್ಕಾಲಿಕ ಹುದ್ದೆ ಇದಾಗಿದ್ದು. ಒಂದು ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗುತ್ತದೆ.  ಗರಿಷ್ಠ ವಯೋಮಿತಿ 45 ವರ್ಷ ನಿಗದಿಪಡಿಸಲಾಗಿದೆ. ನಿಗದಿತ ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡಿ ವಯೋಮಿತಿ ದೃಢೀಕರಣ, ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮರ್ಥ್ಯಗಳು ಹಾಗೂ ರೆಸ್ಯೂಮ್ ಜತೆಗೆ ಅರ್ಜಿಯನ್ನು ಇ ಮೇಲ್ ಮೂಲಕ [email protected] ಗೆ ಪಿಡಿಎಫ್ ಫಾರ್ಮ್ಯಾಟ್​ನಲ್ಲಿ ಸಲ್ಲಿಸಬೇಕು. ಅರ್ಜಿ ನಮುನೆ http://rdrp.karnataka.gov.in ನಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ ಅದೇ ವೆಬ್​ಸೈಟ್ ನೋಡಬಹುದು.

    ಯುಪಿಎಸ್​​ಸಿ : ನಾಗರಿಕ ಸೇವಾ ಪರೀಕ್ಷೆಯ ಅಂಕಪಟ್ಟಿ ಸೆಪ್ಟೆಂಬರ್ 7 ನಂತರ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts