More

    ಗದಗ: ಅರ್ಜಿ ಆಹ್ವಾನ

    ಗದಗ: 2024-25 ನೇ ಸಾಲಿಗೆ ಗದಗ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು 6 ನೇ ತರಗತಿಗೆ ದಾಖಲಿಸುವ ಕುರಿತು ಅರ್ಹ ವಿದ್ಯಾರ್ಥಿಗಳಿಂದ  ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ  ಅಭ್ಯರ್ಥಿಯು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಾಗಿರಬೇಕು,ಪ್ರಸ್ತುತ ವರ್ಷ 6ನೇ ತರಗತಿಗೆ ಪ್ರವೇಶ ಪಡೆಯಲು 5ನೇ ತರಗತಿಯಲ್ಲಿ ಶೇ.60 ಕ್ಕಿಂತ ಹೆಚ್ಚಿನ ಅಂಕ ಗಳಿಸಿರಬೇಕು,ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷ ಮಿತಿಯೊಳಗಿರಬೇಕು,ವಿದ್ಯಾರ್ಥಿಗಳ ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಅಂಕಪಟ್ಟಿಗಳ ದೃಢೀಕೃತ ಪ್ರತಿ ಮತ್ತು 2 ಭಾವಚಿತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಿ ಮೇ 21 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಒಂದು ಕುಟುಂಬದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಲಿಖಿತ ಪ್ರವೇಶ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08372-231828 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಗದಗ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಗದಗ ದಲ್ಲಿ ಖಾಲಿಯಿರುವ ಕೃತಕಾಂಗ ಜೋಡಣೆ ಅಭಿಯಂತರರು ಹುದ್ದೆಗೆ ಪಿ ಮತ್ತು ಒ ಎಂಜಿನಿಯರಿಂಗ್  ಪದವಿ/ಡಿಪೆÇ್ಲಮಾ ಜೊತೆಗೆ 2 ರಿಂದ 5 ವರ್ಷಗಳ ಅನುಭವ ಹೊಂದಿರುವ, ಕ್ಲಿನಿಕಲ್ ಸೈಕಾಲಿಜಿಸ್ಟ್ ಹುದ್ದೆಗೆ ಕ್ಲಿನಿಕಲ್ ಸೈಕಾಲಜಿಯಲ್ಲಿ ಎಂ.ಎ. ಅಥವಾ ಎಂ.ಎಸ್ಸಿ.ಪಡೆದಿರುವ, ಸ್ಪೀಚ್ ಥೆರಪಿಸ್ಟ್ ಆಡಿಯಾಲಿಜಿಸ್ಟ್ ಹುದ್ದೆಗೆ ಸ್ಪೀಚ್ ಮತ್ತು ಆಡಿಯಾಲಜಿಯಲ್ಲಿ ಬಿ.ಎಸಿ ಪಡೆದಿರುವ, ಮೊಬಿಲಿಟಿ ಇನ್ಸ್‍ಟ್ರಕ್ಟರ್ ಹುದ್ದೆಗೆ ಓ ಮತ್ತು ಎಂ ನಲ್ಲಿ ಸರ್ಟಿಫಿಕೇಟ್ ಕೋರ್ಸ್ ಹೊಂದಿರುವ, ಇಯರ್ ಮೊಲ್ಡ್ ಟೆಕ್ನಿಷಿಯನ್ ಹುದ್ದೆಗೆ  ಇಯರ್ ಮೋಲ್ಡ್ ಟೆಕ್ನಾಲಜಿಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಪಡೆದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮೇ 29 ರ ಒಳಗಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಗದಗ, ಕೆ,ಹೆಚ್, ಪಾಟೀಲ ಸ್ಟೇಡಿಯಂ ಎದುರು ಗದಗ ಕಚೇರಿಗೆ ಲಿಖಿತ ಅರ್ಜಿ ಸಹಿತ ಅಂಕಪಟ್ಟಿಗಳ ನಕಲು ಪ್ರತಿಯನ್ನು ದೃಢೀಕರಿಸಿ ಸಲ್ಲಿಸಬಹುದಾಗಿದೆ. ಹೆಚ್ಚಿನ  ಮಾಹಿತಿಗಾಗಿ ಡಾ. ಎಮ್ ಡಿ ಸಮುದ್ರಿ ಗೌರವ ಕಾರ್ಯದರ್ಶಿಗಳು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಗದಗ (ಮೊ. 99641 87315 / 80730 41618) ಇವರನ್ನು ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts