ದಾಳಿ ವೇಳೆ ಭಯದಿಂದ ಹಣ ನುಂಗಿದ ಅಧಿಕಾರಿ; ಸಾಕ್ಷಿಗಾಗಿ ಲೋಕಾಯುಕ್ತ ಆಫೀಸರ್​ಗಳ ನಡೆ ಮಾತ್ರ ರೋಚಕ!| Lokayukta

dk (45)
Published on

ಕೊಪ್ಪಳ : ಜಿಲ್ಲಾ ಸಹಕಾರಿ‌ ಇಲಾಖೆ ಉಪ ನಿಬಂಧಕ ದಸ್ತಗಿರ ಅಲಿ ಎಂಬ ಅಧಿಕಾರಿ ಲಂಚ ಪಡೆವಾಗ ದಾಳಿ ನಡೆಸಿದ ಲೋಕಾಯುಕ್ತ(Lokayukta) ಪೊಲೀಸರು ಲಂಚದ ಹಣ ಸಮೇತ ಅಧಿಕಾರಿಯನ್ನು ಶನಿವಾರ ಸಂಜೆ ವಶಕ್ಕೆ ಪಡೆದರು. ಈ ವೇಳೆ ಗಾಬರಿ ಬಿದ್ದ ಅಧಿಕಾರಿ ಲಂಚದ ಹಣ ನುಂಗಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ಭೀಮನಗೌಡ ಎಂಬುವರು ಸಂಘ ನೋಂದಣಿಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಎರಡು ಸಾವಿರ ರೂ. ಲಂಚ ನೀಡುವಂತೆ ದಸ್ತಗಿರ ಅಲಿ ಬೇಡಿಕೆ ಇಟ್ಟಿದ್ದ.‌ ಈ ಬಗ್ಗೆ ಭೀಮನಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಶನಿವಾರ ಸಂಜೆ ಜಿಲ್ಲಾಡಳಿತ ಭವನದ‌ ಸಹಕಾರಿ‌ ಇಲಾಖೆ ಕಚೇರಿಯಲ್ಲಿಯೇ ಹಣ ಪಡೆಯುವಾಗ ದಾಳಿ ನಡೆಸಿದ್ದಾರೆ.

ದಿಢೀರ್ ದಾಳಿಯಿಂದ ಬೆದರಿದ ಅಧಿಕಾರಿ ಲಂಚದ ಹಣವನ್ನು ಬಾಯಿಯೊಳಗೆ ಹಾಕಿ ನುಂಗಲು ಯತ್ನಿಸಿದ್ದಾನೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಪಂಚರ ಸಮಕ್ಷಮದಲ್ಲಿ ಎಲ್ಲವನ್ನೂ ವಿಡಿಯೋ ಮಾಡಿಕೊಂಡಿದ್ದಾರೆ‌. ಆಸ್ಪತ್ರೆಗೆ ಕರೆದೊಯ್ದು ಹಣ ವಾಪಸ್ ತೆಗೆಸಿದ್ದಾರೆ. ಅಧಿಕಾರಿಗೆ ಯಾವುದೇ ಪ್ರಾಣಪಾಯವಾಗಿಲ್ಲ. ಬಳಿಕ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಸಿ ವಶಕ್ಕೆ ಪಡೆದುಕೊಂಡರು.

ರಾಯಚೂರು ಲೋಕಾಯುಕ್ತ ಎಸ್ಪಿ ಶಶೀಧರ ಮಾರ್ಗದರ್ಶನದಲ್ಲಿ, ಪಿಐ ನಾಗರತ್ನ ತಂಡ ದಾಳಿ ನಡೆಸಿ ತನಿಖೆ‌ ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net