2022ರಲ್ಲಿ ವಿಜಯಪುರ ಜನತೆಯನ್ನು ಕಾಡಿದ್ದ ಭೂಕಂಪನದ ಆತಂಕ ಹೊಸ ವರ್ಷದಲ್ಲೂ ಮುಂದುವರಿಕೆ!

earthquake
Published on

ವಿಜಯಪುರ: ವಿಜಯಪುರ ನಗರ ಹಾಗೂ ಹೊರವಲಯದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಸಂಜೆ 5.56 ಗಂಟೆಗೆ ಭೂಮಿ ನಡುಗಿದ್ದು, ಸ್ಫೋಟದ ರೀತಿಯಲ್ಲಿ ಸದ್ದಾಗಿದೆ. ಗೋಳಗುಮ್ಮಟ ಏರಿಯಾ, ಕೀರ್ತಿ ನಗರ, ಜಲನಗರ, ತೊರವಿ, ಗಣೇಶ ನಗರ, ಮಹಲ್ ಭಾಗದಲ್ಲಿ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ.

ಕಳೆದ ವರ್ಷದಲ್ಲಿ ವಿಜಯಪುರ ಜಿಲ್ಲೆ ಹಲವು ಭಾರಿ ಭೂಮಿಯ ಕಂಪನದಿಂದ ನಲುಗಿತ್ತು. 2022ರಲ್ಲಿ 14 ಬಾರಿ ಜಿಲ್ಲೆಯಲ್ಲಿ ಭೂಮಿ ಕಂಪಿಸಿತ್ತು. ಕಳೆದ ಜುಲೈನಲ್ಲಿ ತಿಕೋಟಾ ಹಾಗೂ ಇಂಡಿ ಭಾಗದಲ್ಲಿ ಮುಂಜಾನೆ ಸಂಭವಿಸಿದ ಕಂಪನದಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು. 48 ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು.

ಇದೀಗ ಮತ್ತೆ ವರ್ಷಾರಂಭದಲ್ಲೇ ವಿಜಯಪುರ ಜಿಲ್ಲೆಯಲ್ಲಿ ಭೂಮಿ ಕಂಪಿಸಿದೆ. ಇದು ಜನರನ್ನು ಮತ್ತಷ್ಟು ಆತಂಕಕ್ಕೆ
ದೂಡಿದೆ. ರಾಷ್ಟ್ರ ರಾಜಧಾನಿಯಲ್ಲೂ ಹೊಸ ವರ್ಷದ ಆರಂಭದಲ್ಲೇ ಭೂಕಂಪನಕ್ಕೆ ನಲುಗಿದೆ. ಜನವರಿ 1ರಂದು 3.8ರ ತೀವ್ರತೆಯಲ್ಲಿ ದೆಹಲಿಯಲ್ಲಿ ಭೂಮಿ ಕಂಪಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net