

Ganesh : ಪ್ರಪಂಚದಾದ್ಯಂತ ಗಣೇಶ ಚತುರ್ಥಿಯನ್ನು ಆಚರಿಸುತ್ತಿದ್ದು, ಮಾರುಕಟ್ಟೆಯಲ್ಲಿ ವಿಧವಿಧವಾದ ಗಣೇಶನ ಮೂರ್ತಿಗಳನ್ನು ನಾವು ನೋಡಬಹುದು. ಪ್ರತಿ ವರ್ಷ ವಿಭಿನ್ನವಾದ ಗಣಪತಿಗಳನ್ನು ನಾವು ಗಮನಿಸಬಹುದು. ಹಾಗೆಯೇ ಕಲಾವಿದರು ಯಾವ ರೀತಿಯ ವಿಗ್ರಹಗಳನ್ನು ತಯಾರಿಸುತ್ತಾರೆ ಎಂದು ಕುತೂಹಲದಿಂದ ಕುಳಿತಿರುವುದ್ದೇವೆ. ಈ ವರ್ಷದ ಮಧ್ಯಪ್ರದೆಶದ ಕಲಾವಿದರೊಬ್ಬರು ತಯಾರಿಸಿದ ಗಣಪತಿ ವಿಗ್ರಹವು ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರಿಂದ ಸ್ಫೂರ್ತಿ ಪಡೆದಿದ್ದು, ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಪಾಲಿಕೆಯಿಂದ ಮಣ್ಣಿನ ಗಣೇಶ ಮೂರ್ತಿ ಸಿದ್ಧಪಡಿಸುವ ಕಾರ್ಯಾಗಾರ -ಪಾಲಿಕೆಯಿಂದ ಬದಲಾವಣೆ ಪರ್ವ ಪ್ರಾರಂಭ- ಸಚಿವ ಹಾಗೇ ಮಹಾರಾಷ್ಟ್ರದ ಉಲ್ಲಾಸ್ನಗರದಲ್ಲಿಯೂ ಇದೇ ರೀತಿಯ ವಿಗ್ರಹವನ್ನು ಕಲಾವಿದರು ಮಾಡಿರುವುದನ್ನು ಕಾಣಬಹುದು. ಗಣೇಶನ ವಿಗ್ರಹವು ಹಳದಿ-ಕೇಸರಿ ಧೋತಿಯಲ್ಲಿ ಕಂಗೊಳಿಸುತ್ತಿದೆ. ಚಂದನ ಟಿಕಾ, ಜಡೆ ಮತ್ತು ಪ್ರಶಾಂತ ಧ್ಯಾನ ಭಂಗಿಯಿಂದ ಅಲಂಕರಿಸಲ್ಪಟ್ಟಿದೆ. ಇದು ಪ್ರೇಮಾನಂದ ಜಿ ಮಹಾರಾಜ್ ಅವರ ಪ್ರತಿಮಾರೂಪದ ನೋಟವನ್ನು ಪ್ರತಿಧ್ವನಿಸುತ್ತದೆ.
ಈ ಚಿತ್ರವನ್ನು @JeetN25 ಎಂಬ ಎಕ್ಸ್ ಬಳಕೆದಾರರೊಬ್ಬ ತನ್ನ ಖಾತೆಯಲ್ಲಿ ಮಧ್ಯಪ್ರದೇಶದ ಕಲಾವಿದ ಗಣಪತಿಯನ್ನು ಪ್ರೇಮಾನಂದ ಜಿ ಮಹಾರಾಜನಂತೆ ಬಿಂಬಿಸಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಪ್ರೇಮಾನಂದ ಮಹಾರಾಜರ ಜನಪ್ರಿಯತೆಯನ್ನು ಜನರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೋರ್ವ ಬಳಕೆದಾರ ಗಣಪತಿ ಮೂರ್ತಿಯನ್ನು ಪ್ರೇಮ್ ಆನಂದ್ ಮಹಾರಾಜರಂತೆ ಮಾಡಿ ಮಾರುಕಟ್ಟೆಗೆ ತಂದಿದ್ದಾರೆ. ಜನರು ಅವರ ಜನಪ್ರಿಯತೆಯ ಲಾಭ ಪಡೆಯಲು ಪ್ರಾರಂಭಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)