

panic attack : ಪ್ರಥಮ ಚಿಕಿತ್ಸೆ ಎಂಬುದನ್ನು ನಾವು ಸಾಮಾನ್ಯವಾಗಿ ಶಾಲೆಯಲ್ಲಿ ಕಲಿತಿರುವಂತಹ ಒಂದು ಪಾಠವಾಗಿರುತ್ತದೆ. ಚಿಕ್ಕ ಗಾಯಗಳಿಗೆ ಯಾವ ರೀತಿಯಾಗಿ ಪ್ರಾಥಮಿಕ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ನಾವು ತಿಳಿದಿದ್ದೇವೆ. ಯಾವುದಾದರೂ ಪ್ಯಾನಿಕ್ ಅಟ್ಯಾಕ್ ಆದಾಗ ಯಾವ ರೀತಿಯಲ್ಲಿ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂಬುದು ಎಷ್ಟು ಜನರಿಗೆ ತಿಳಿದಿದೆ? ಮನಸ್ಸಿಗೆ ಪ್ರಥಮ ಚಿಕಿತ್ಸೆ ನೀಡಬಹುದೇ? ಎಂಬ ಹಲವಾರು ಪ್ರಶ್ನಡೆಗಳು ಇಮದು ನಮ್ಮಲ್ಲಿ ಹುದುಗಿಹೋಗಿವೆ. ಅಂದಹಾಗೆ ಪ್ಯಾನಿಕ್ ಅಟ್ಯಾಕ್ ಹಾಗೂ ಆತಂಕ ಯಾವ ರೀತಿಯಲ್ಲಿ ಇರುತ್ತದೆ ಎಂದು ತಿಳಿಯಿರಿ.
ಒತ್ತಡ, ಆತಂಕ, ಗಾಬರಿ, ಖಿನ್ನತೆ ಈ ಪದಗಳು ನಮ್ಮ ದೈನಂದಿನ ಜೀವನದಲ್ಲಿ ಒಂದು ಭಾಗವಾಗಿವೆ. ಆದರೂ, ಇವುಗಳು ವಿಭಿನ್ನ ಅರ್ಥಗಳನ್ನು ಹೊಂದಿದ್ದರೂ ಹೆಚ್ಚಾಗಿ ಪರಸ್ಪರ ಬದಲಾವಣೆಯಾಗುತ್ತದೆ. ಇತ್ತೀಚಿನ ಅಧ್ಯಾಯನಗಳು ಕೋವಿಡ್ ನಂತರ ಭಾರತದಲ್ಲಿ ಶೇ. 35ಕ್ಕಿಂತ ಹೆಚ್ಚು ಜನರು ಆತಂಕ್ಕೀಡಾಗಿದ್ದಾರೆ ಎಂದು ತೋರಿಸುತ್ತಿವೆ. ಇದು ಜಾಗತಿಕವಾಗಿ ಪ್ರವೃತ್ತಿಯನ್ನು ಬಿಂಬಿಸುತ್ತಿದೆ.
ಪ್ಯಾನಿಕ್ ಅಟ್ಯಾಕ್ಗಳು ತೀವ್ರವಾದ ಆತಂಕ, ಭಯ ಅಥವಾ ಅಸ್ವಸ್ಥತೆಯಿಂದ ಕೂಡಿರುತ್ತವೆ. ಇವು ಇದ್ದಕ್ಕಿದ್ದಂತೆ ಮನುಷ್ಯನಲ್ಲಿ 10-15 ನಿಮಿಷಗಳಲ್ಲಿ ಗರಿಷ್ಠ ತೀವ್ರತೆಯನ್ನು ತಲುಪುತ್ತವೆ. ಹಾಗೇ ಇವುಗಳು ತುಂಬಾ ಹೊತ್ತು ಆ ವ್ಯಕ್ತಿಯಲ್ಲಿಯೇ ಉಳಿದುಕೊಳ್ಳಬಹುದು.
ಒಂದು ವ್ಯಕ್ತಿಯು ಪ್ಯಾನಿಕ್ ಅಟ್ಯಾಕ್ ಅನುಭವವನ್ನು ಹೊಂದುವುದಾದರೆ ಉಸಿರಾಟದ ತೊಂದರೆ, ಬೆವರುವುದು, ನಡಗುವುದು, ವಾಕರಿಕೆ, ತಲೆ ತಿರುಗುವುದು, ಅತಿಯಾದ ಎದೆ ಬಡಿತ, ಎದೆಯಲ್ಲಿ ಅಸ್ವಸ್ಥತೆಯನ್ನು ಹೊಂದುವ ಸಮಸ್ಯೆಗಳನ್ನು ಅನುಭವಿಸುತ್ತಾನೆ. ಈ ಲಕ್ಷಣಗಳು ಹೆಚ್ಚಾದಲ್ಲಿ ಹೃದಯಘಾತ ಹಾಗೂ ಅಸ್ತಮ ಉಂಟಾಗುತ್ತದೆ. ಇವುಗಳಿಂದ ವ್ಯಕ್ತಿಯ ಸ್ಥಿತಿ ಹದಗೆಡಲು ಪ್ರಾರಂಭಿಸುತ್ತದೆ. ಈ ರೀತಿಯ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರ ಬಳಿ ಹೋಗುವುದು ಉತ್ತಮ ಮಾರ್ಗ.
* ಮೊದಲು ಆತಂಕಗೊಂಡ ವ್ಯಕ್ತಿಯನ್ನು ಶಾಂತಗೊಳಿಸಿ ಮೃದು ಧ್ವನಿಯಲ್ಲಿ ಮಾತನಾಡಿ
* ಆ ವ್ಯಕ್ತಿಯನ್ನು ಜನಸಂದಣಿ ಅಥವಾ ಅನಗತ್ಯ ಗಮನದಿಂದ ದೂರವಿಟ್ಟು, ಶಾಂತ ಸ್ಥಳಕ್ಕೆ ಕರೆದೊಯ್ದು ಸಮಾಧಾನಗೊಳಿಸಿ.
* ಅವರ ಉಸಿರಾಟವನ್ನು ನಿಧಾನಗೊಳಿಸಲು ಸಹಾಯ ಮಾಡಿ. ಸ್ಥಿರ ಉಸಿರಾಟವನ್ನು ಪ್ರೋತ್ಸಾಹಿಸಿ.
* ಈ ಎಲ್ಲಾ ಅಂಶಗಳನ್ನು ಆ ವ್ಯಕ್ತಿಗೆ ಮಾಡುವುದರಿಂದ ಅತಿಯಾದ ಭಾವನೆಗಳು ಕಡಿಮೆಯಾಗುತ್ತವೆ. ಮೊದಲಿನ ಸ್ಥಿತಿಗೆ ತಲುಪಲು ಸಹಾಯವಾಗುತ್ತದೆ.
* ಯಾವುದೇ ರೀತಿಯಲ್ಲೂ ಭಯಗೊಳಿಸುವಂತಹ ಕಾರ್ಯವನ್ನು ಆ ವ್ಯಕ್ತಿ ಎದುರು ಮಾಡಬೇಡಿ. ಇವುಗಳಿಂದ ಅವರು ಭಯಪಡಬಹುದು.
ಇದನ್ನೂ ಓದಿ: ಗಣತಿ ಮುಖ್ಯ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಿ
ಪ್ಯಾನಿಕ್ ಅಟ್ಯಾಕ್ ಅಥವಾ ಹೆಚ್ಚಿದ ಆತಂಕವನ್ನು ಅನುಭವಿಸುತ್ತಿರುವವರು ಯಾರನ್ನಾದರೂ ಗುರುತಿಸಿದರೆ ಅವರನ್ನು ಹೇಗೆ ಅದರಿಂದ ಹೊರ ತರಬೇಕು ಎಂದು ಗಮನಿಸಿ.
* ಭಾವನಾತ್ಮಕವಾಗಿ ತೊಂದರೆ ಅನುಭವಿಸುತ್ತಿದ್ದರೆ ಅವರಿಗೆ 2 ನಿಮಿಷಗಳ ಧೈರ್ಯವನ್ನು ನೀಡಿ. ಹಾಗೇ ಇನ್ನಿತರ ಭಯ, ಆತಂಕದಂತಹ ಗುಣಗಳನ್ನು ಹೊಂದಿದ್ದರೆ ಅವರಿಗೆ ವಿಷಯವನ್ನು ಮುಕ್ತವಾಗಿ ಮನಸ್ಸಿನಿಂದ ಹೊರಹಾಕಲು ಹೇಳಿ.
* ಆ ವ್ಯಕ್ತಿಗೆ ಸಂಪೂರ್ಣ ಗಮನವನ್ನು ನೀಡಿ ಹಾಗೆಯೇ, ನೀವು ಇವಾಗ ಚೆನ್ನಾಗಿದ್ದೀರಿ, ಯವುದೇ ರೀತಿಯಲ್ಲೂ ಸಮಸ್ಯೆಗಳನ್ನು ಅನುಭವಿಸುತ್ತಿಲ್ಲ. ನಾವು ನೋಡಿದ್ದೇವೆ. ಎಂದು ಧನಾತ್ಮಕ ಹೇಳಿಕೆಗಳನ್ನು ನೀಡುವುದರಿಂದ ಅವರು ಆತಂಕ, ಭಯಗಳಂದ ಹೊರ ಬರಲು ಸಾಧ್ಯವಾಗುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ