ಟೋಲ್​​ನಲ್ಲಿ 10 ರೂ. ಹೆಚ್ಚುವರಿ ಕಡಿತ; ಗ್ರಾಹಕನಿಗೆ 8 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ!

court
Published on

ಬೆಂಗಳೂರು: ಹೆದ್ದಾರಿ ಟೋಲ್​​​ನಲ್ಲಿ 10 ರೂಪಾಯಿ ಹೆಚ್ಚುವರಿ ಕಡಿತಗೊಂಡಿದ್ದಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದ ಗ್ರಾಹಕನಿಗೆ 8 ಸಾವಿರ ರೂ ಪರಿಹಾರ ಪಾವತಿಸಲು ಜಾಸ್ ಟೋಲ್ ಸಂಸ್ಥೆಗೆ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.

ಟೋಲ್ ನಲ್ಲಿ 10 ರೂ. ಹೆಚ್ಚುವರಿ ಕಡಿತಗೊಂಡಿದ್ದಕ್ಕೆ ಗ್ರಾಹಕನಿಗೆ 8 ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಜಾಸ್ ಟೋಲ್ ಸಂಸ್ಥೆಗೆ ಗ್ರಾಹಕರ ನ್ಯಾಯಾಲಯ ಆದೇಶ ಹೊರಡಿಸಿದೆ.

ನಡೆದಿದ್ದೇನು?: ಬೆಂಗಳೂರಿನ ಗಾಂಧಿನಗರದ ನಿವಾಸಿಯಾಗಿರುವ ಎಂ.ಬಿ.ಸಂತೋಷ್ 2020ರಲ್ಲಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ಹೆಚ್ಚುವರಿಯಾಗಿ 10 ರೂ. ಕಡಿತಗೊಂಡಿತ್ತು. ಕಾರಿನಲ್ಲಿ ಅಳವಡಿಸಿದ್ದ ಫಾಸ್ಟ್ ಟ್ಯಾಗ್ ಮೂಲಕ ಸಂತೋಷ್ ಅವರ ಬ್ಯಾಂಕ್ ಖಾತೆಯಿಂದ 10 ರೂ. ಹೆಚ್ಚುವರಿ ಕಡಿತಗೊಂಡಿತ್ತು. ಈ ವಿಚಾರವಾಗಿ ಬೇಸರಗೊಂಡಿದ್ದ ಸಂತೋಷ್​​ ಅವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಕುರಿತು ಸಂತೋಷ್ ಅವರು 25 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವಿರುದ್ಧ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.

ಗ್ರಾಹಕ ನ್ಯಾಯಾಲಯ ಹೇಳಿದ್ದೇನು?: ಹೆದ್ದಾರಿ ಟೋಲ್ ನಲ್ಲಿ ವಾಹನ ಸವಾರನಿಗೆ 10 ರೂ ಹೆಚ್ಚುವರಿ ಕಡಿತಗೊಂಡಿದೆ. ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಒಟ್ಟು 8 ಸಾವಿರ ರೂ. ಪರಿಹಾರ ನೀಡಬೇಕೆಂದು ಆದೇಶಿಸಿ ತೀರ್ಪು ಪ್ರಕಟಿಸಿದೆ. ಈ ಹಣವನ್ನು ಕೊಡಲು ತಡಮಾಡಿದ್ದಲ್ಲಿ ವರ್ಷಕ್ಕೆ 10% ಬಡ್ಡಿಯೊಂದಿಗೆ ಪರಿಹಾರವನ್ನು ನೀಡಬೇಕಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net